ಸಾಮಾನ್ಯರ ಜೊತೆ ಸಾಮಾನ್ಯನಂತೆ ಕೂತು ಕೋಟಿ ಆಟ ಆಡಿಸುವ ಪವರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪರ್ಧಿ ಕೇಳಿದ ಪ್ರಶ್ನೆಗೆ ಫುಲ್ ಶಾಕ್ ಆಗಿದ್ದಾರೆ. ಉತ್ತರ ಏನೆಂದು ಕೇಳಿದರೆ ನೀವು ಶಾಕ್ ಆಗ್ತೀರಾ!
ಪವರ್ ಸ್ಟಾರ್ ಹೆಸರಲ್ಲೇ ಪವರ್ ಇದೆ ಅಂದ್ಮೇಲೆ ಅವರು ನಡೆಸುವ ಕಾರ್ಯಕ್ರಮದಲ್ಲಿ ಇರಲ್ವಾ? ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋನಲ್ಲಿ ಪ್ರಶ್ನೆ ಕೇಳುವ ಪುನೀತ್ ಗೆ ಸ್ಪರ್ಧಿಗಳು ಮರು ಪ್ರಶ್ನೆ ಕೇಳುವ ಸಂದರ್ಭ ಬಂದಿತ್ತು.
ಕಾಲಿನ ಶಕ್ತಿ ಕಳೆದುಕೊಂಡವನಿಗೆ ಕೋಟ್ಯಧಿಪತಿಯೇ ಆಸರೆ!
undefined
ಮೊದಲು ಕೇಳಿದ ಪ್ರಶ್ನೆ ‘ನೀವು ಸ್ಟಾರ್ ನಟನ ಮಗನಾಗಿ ಹುಟ್ಟಿದ್ದೀರಿ. ನೀವು ಏನೇ ಸಾಧನೆ ಮಾಡಿದ್ರೂ ಅಣ್ಣಾವ್ರ ಮಗ ಎಂದು ಕರೆಯುತ್ತಾರೆ. ಇದನ್ನು ಹೇಗೆ ಎದುರಿಸ್ತೀರಿ? ಎಂದಿದ್ದಕ್ಕೆ ಪುನೀತ್ ಕಾಮ್ ಅ್ಯಂಡ್ ಕಂಪೋಸ್ಡ್ ಆಗಿ ‘ಚಿಕ್ಕ ವಯಸ್ಸಿನಿಂದ ಅಪ್ಪಾಜಿ ಜೊತೆ ಹೆಚ್ಚಾಗಿ ಸಮಯ ಕಳೆದಿದ್ದು ನಾನೇ. ಆದರೆ ಮನೆಯಲ್ಲಿ ತುಂಬಾ ಮಕ್ಕಳಿದ್ವಿ. ಆದರಿಂದ ಹೆಚ್ಚಾಗಿ ಅತಿಥ್ಯವೇನು ಸಿಗಲಿಲ್ಲ. ಆಮೇಲೆ ವರ್ಷದಲ್ಲಿ ಎರಡು ತಿಂಗಳು ಗಾಜನೂರಿಗೆ ಹೋಗುತ್ತಿದ್ವಿ. ಅದರಿಂದ ಯಾವತ್ತೂ ಸ್ಟಾರ್ ವಿಚಾರ ತಲೆಗೆ ಬರ್ತಿಲ್ಲಿಲ್ಲ’ ಎಂದು ಉತ್ತರಿಸಿದರು.
ಅಷ್ಟೇ ಅಲ್ಲದೆ ತಮಗೆ ಮನೆಯಲ್ಲಿ ಕಲಿಸಿದ ಪಾಠವೇನೆಂದರೆ ಚೆನ್ನಾಗಿ ಕೆಲಸ ಮಾಡಬೇಕು. ಆನಂತರ ಕಸರತ್ತು ಮಾಡಿ ಮೈ ದಂಡಿಸಬೇಕು ಹಾಗೂ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದರು.