ನಟ ಉಪೇಂದ್ರ ಪುತ್ರಿ ಆಯ್ತು. ಈಗ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ ಚಾರಿತ್ರ್ಯ ಗಣೇಶ್ ಕೂಡ ಸಿನಿಮಾರಂಗ ಪ್ರವೇಶಿಸುತ್ತಿದ್ದಾರೆ. ಚಾರಿತ್ರ್ಯ ಮೊದಲ ಬಾರಿಗೆ ನಟಿಸುತ್ತಿರುವುದು ತಮ್ಮ ತಂದೆ ನಟನೆಯ ‘ಚಮಕ್’ ಚಿತ್ರದಲ್ಲೇ ಎಂಬುದು ವಿಶೇಷ.
ಬೆಂಗಳೂರು (ಆ.30): ನಟ ಉಪೇಂದ್ರ ಪುತ್ರಿ ಆಯ್ತು. ಈಗ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ ಚಾರಿತ್ರ್ಯ ಗಣೇಶ್ ಕೂಡ ಸಿನಿಮಾರಂಗ ಪ್ರವೇಶಿಸುತ್ತಿದ್ದಾರೆ. ಚಾರಿತ್ರ್ಯ ಮೊದಲ ಬಾರಿಗೆ ನಟಿಸುತ್ತಿರುವುದು ತಮ್ಮ ತಂದೆ ನಟನೆಯ ‘ಚಮಕ್’ ಚಿತ್ರದಲ್ಲೇ ಎಂಬುದು ವಿಶೇಷ.
ಸಿಂಪಲ್ ಸುನಿ ನಿರ್ದೇಶನದ, ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ‘ಚಮಕ್’ ಚಿತ್ರದ ಒಂದು ಪುಟ್ಟ ಪಾತ್ರದಲ್ಲಿ ಚಾರಿತ್ರ್ಯ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಡುತ್ತಿದ್ದಾರೆ. ಸದ್ಯ ಗಣೇಶ್ ಅವರ ‘ಮುಗುಳು ನಗೆ’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಅಪ್ಪನ ಸಿನಿಮಾ ತೆರೆ ಕಾಣುತ್ತಿರುವ ಹೊತ್ತಿನಲ್ಲೇ ಮಗಳು ಕೂಡ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ‘ನನ್ನ ಮಗಳು ಚಾರಿತ್ರ್ಯ ಚಮಕ್ ಚಿತ್ರದ ಒಂದು ಪುಟ್ಟ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಆ ಪಾತ್ರಕ್ಕೆ ಒಂದು ಕ್ಯೂಟ್ ಮಗು ಬೇಕಿತ್ತು. ಹೀಗಾಗಿ ಚಾರಿತ್ರ್ಯ ಅವರನ್ನೇ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ನಟ ಗಣೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಅಂದಹಾಗೆ ನಟಿ ಅಮೂಲ್ಯ ಅವರ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಚಾರಿತ್ರ್ಯ ಗಣೇಶ್ ಮಾಡಿದ ಡ್ಯಾನ್ಸ್ ಎಲ್ಲರ ಗಮನ ಸೆಳೆದಿತ್ತು. ಗಣೇಶ್, ಶಿಲ್ಪಾ ಗಣೇಶ್, ದುನಿಯಾ ವಿಜಯ್ ಸೇರಿದಂತೆ ಹಲವು ನಟ, ನಟಿಯರ ಜತೆ ಚಾರಿತ್ರ್ಯ ಹಾಕಿದ ಸ್ಟೆಪ್ಸ್‌ಗೆ ಎಲ್ಲರೂ ಅಚ್ಚರಿಗೊಂಡಿದ್ದರು. ಯೋಗರಾಜ್ ಭಟ್ ನಿರ್ದೇಶನದ ‘ಮುಗುಳು ನಗೆ’ ಚಿತ್ರ ತೆರೆಗೆ ಬಂದ ನಂತರ ‘ಚಮಕ್’ ಚಿತ್ರೀಕರಣ ಶುರುವಾಗಲಿದ್ದು, ಚಾರಿತ್ರ್ಯ ಪಾತ್ರ ಕೂಡ ಆಗಲೇ ಚಿತ್ರೀಕರಣ ನಡೆಯಲಿದೆ. ಈಗಾಗಲೇ ‘ಐರಾವತ’ ಚಿತ್ರದಲ್ಲಿ ದರ್ಶನ್ ಪುತ್ರ ವಿನೀಶ್ ನಟಿಸಿದ್ದಾರೆ. ಉಪೇಂದ್ರ ಮಗಳು ಐಶ್ವರ್ಯ ಅವರು ತಮ್ಮ ತಾಯಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ‘ಹೌರಾ ಬ್ರಿಡ್ಜ್’ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಲಿದ್ದಾರೆ. ನೆನಪಿರಲಿ ಪ್ರೇಮ್, ಜೋಗಿ ಪ್ರೇಮ್ ಪುತ್ರ ಸೂರ್ಯ ಹೀಗೆ ಸ್ಟಾರ್‌ಗಳ ಮಕ್ಕಳು ಬಣ್ಣ ಹಚ್ಚುತ್ತಿದ್ದಾರೆ. ಅವರ ಸಾಲಿಗೆ ಈಗ ಗಣೇಶ್ ಪುತ್ರಿ ಚಾರಿತ್ರ್ಯ ಹೊಸದಾಗಿ ಸೇರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.