ಗೋಲ್ಡನ್ ಸ್ಟಾರ್‌ಗೆ ಕಿಚ್ಚ ಸಂಬಂಧಿ: ಗೊತ್ತಾಗಿದ್ದು ಹೇಗೆ?

Published : Sep 15, 2018, 12:07 PM ISTUpdated : Sep 19, 2018, 09:26 AM IST
ಗೋಲ್ಡನ್ ಸ್ಟಾರ್‌ಗೆ ಕಿಚ್ಚ ಸಂಬಂಧಿ: ಗೊತ್ತಾಗಿದ್ದು ಹೇಗೆ?

ಸಾರಾಂಶ

ಸ್ಯಾಂಡಲ್‌ವುಡ್ ಎಂಬ ಕುಟುಂಬದಲ್ಲಿ ಎಲ್ಲರೂ ಒಂದೇ. ಒಬ್ಬರಿಗೊಬ್ಬರು ಸಂಬಂಧಿಗಳು. ಆದರೆ, ವಿಷಯವೇನೆಂದರೆ ಕಿಚ್ಚ ಸುದೀಪ್‌ಗೆ, ಗೋಲ್ಡನ್ ಸ್ಟಾರ್ ಗಣೇಶ್ ಸಂಬಂಧಿಯಂತೆ!

ಬೆಂಗಳೂರು (ಸೆ.15): ಇತ್ತೀಚೆಗೆ ನಡೆದ ಕರ್ನಾಟಕ ಚಲನಚಿತ್ರ ಕಪ್  (ಕೆಸಿಸಿ) ಪಂದ್ಯದ ವೇಳೆ ಸುದೀಪ್‌ಗೆ ಈ ವಿಷಯ ಗೊತ್ತಾಯ್ತಂತೆ. ಉಭಯ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದ ಕಿಚ್ಚ ಹಾಗೂ ಗೋಲ್ಡನ್ ಸ್ಟಾರ್ ಅದು, ಇದು ಎಂದು ಪುರುಸೊತ್ತು ಮಾಡಿಕೊಂಡು ಹರಟಿದ್ದಾರೆ. 

ಹೀಗೆ, ಅದು-ಇದು ಮಾತನಾಡುತ್ತಾ ಅವರು-ಇವರ ಬಗ್ಗೆಯೂ ಮಾತನಾಡಿದ್ದಾರೆ. ಒಂದೊಂದೇ ಮಾತನಾಡುತ್ತಾ, ಮಾತನಾಡುತ್ತಾ ನಿಮಗೆ ಅವರು ಹೇಗೆ ಗೊತ್ತು?...ಎಂದೂ ಮಾತನಾಡಿಕೊಂಡಿದ್ದಾರೆ. ಆಗ ಗೊತ್ತಾಗಿದೆ ಇವರಿಬ್ಬರೂ ದೂರದ ಸಂಬಂಧಿಗಳೆಂದು. 'ಅವರ ಅಕ್ಕನ ಗಂಡನ ತಂಗಿಯ ಮಾವನ...' ಹೇಗೋ ಒಟ್ಟಿನಲ್ಲಿ ಒಬ್ಬರಿಗೊಬ್ಬರು ಬಂಧುಗಳಾಗುತ್ತಾರಂತೆ.

ಈ ವಿಷಯವನ್ನು ಖುದ್ದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. 'ಹೀಗೆ ಮಾತನಾಡ್ತಾ ಮಾತನಾಡ್ತ ಗಣೇಶ್ ನನ್ನ ದೂರದ ಸಂಬಂಧಿ ಎಂದು ಗೊತ್ತಾಯಿತು. ನಮ್ಮನೆಯಲ್ಲೀಗ ಚಿನ್ನವಿದ್ದು, ನಾನೀಗ ಶ್ರೀಮಂತ...' ಎಂದು ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
BBK13: 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?