
ಜಯಂತ್ ಬರೆದಿರುವ ‘ಹಾಲಿನ ಮೀಸೆ’ ಕತೆಯೇ ಈಗ ಸಿನಿಮಾ ಆಗುತ್ತಿದೆ. ‘ಅಮೃತ ಬಳ್ಳಿಯ ಕಷಾಯ’ ಎನ್ನುವ ಕಥಾಸಂಕಲನದಲ್ಲಿ ಬರುವ ಮೊದಲ ಕತೆಯೇ ಈ ಹಾಲಿನ ಮೀಸೆ. ಮನೆ ಕೆಲಸದ ಹುಡುಗನ ಸುತ್ತ ಸಾಗುವ ಕತೆ ಇದು. ತುಂಬಾ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುವ ಈ ಕತೆಗೆ ಕಾಸರವಳ್ಳಿ ಅವರು ದೃಶ್ಯ ರೂಪ ನೀಡುತ್ತಿದ್ದಾರೆ. ಚಿತ್ರದ ಹೆಸರು ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’.
ಹಾಡು ಹುಟ್ಟುವ ಸಮಯ ಹೇಗಿರುತ್ತೆ? ಜಯಂತ್ ಕಾಯ್ಕಿಣಿ ಹೇಳ್ತಾರೆ...
ನನಗೆ ಜಯಂತ್ ಕಾಯ್ಕಿಣಿ ಅವರ ಕತೆಗಳು ತುಂಬಾ ಇಷ್ಟ. ಅವರ ಸಾಕಷ್ಟುಕತೆಗಳನ್ನು ಓದಿದ್ದೇನೆ. ಹಾಲಿನ ಮೀಸೆ ಕತೆ ಓದುವಾಗಲೇ ಇದನ್ನು ಸಿನಿಮಾ ಮಾಡಬಹುದು ಎಂದು ಯೋಚಿಸಿದ್ದೆ. ಈಗ ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ.- ಗಿರೀಶ್ ಕಾಸರವಳ್ಳಿ
ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಎಚ್‌ಎಂ ರಾಮಚಂದ್ರ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಉಡುಪಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ‘ಹಾಲಿನ ಮೀಸೆ ಕತೆಗೆ ಬೇರೆ ರೀತಿಯ ಸ್ವರೂಪ ಕೊಟ್ಟು ತೆರೆ ಮೇಲೆ ತರುತ್ತಿದ್ದೇವೆ.
ನೃತ್ಯಗಾತಿ ಜತೆ ಕಾಸರವಳ್ಳಿ ಪುತ್ರ ಅಪೂರ್ವ ಮದುವೆ
ಇಷ್ಟೊತ್ತಿಗೆ ಶೂಟಿಂಗ್ ಶುರುವಾಗಬೇಕಿತ್ತು. ಆದರೆ, ಮಳೆಯ ಕಾರಣಕ್ಕೆ ತಡವಾಗುತ್ತಿದೆ. ಮಳೆ ನಿಂತ ಕೂಡಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು. ಅಂದಹಾಗೆ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆಂಬುದು ಎಂಬುದು ಇನ್ನಷ್ಟೆ ತಾರಾಗಣ ಆಯ್ಕೆ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ತಿಂಗಳಲ್ಲಿ ಈ ಸಿನಿಮಾ ಚಿತ್ರೀಕರಣಕ್ಕೆ ತೆರಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.