
ಬೆಂಗಳೂರು(ಜೂ.22): ಕನ್ನಡದ ನಂ.1 ಕಮೆಡಿಯನ್ ಯಾರು? ಹೀಗಂತ ಕೇಳಿದ್ರೆ ಒಂದಷ್ಟು ಜನ ಸಾಧು ಮಹಾರಾಜ್ ಎನ್ನಬಹುದು, ಇನ್ನೊಂದಷ್ಟು ಜನ ರಂಗಾಯಣ ರಘು ಅನ್ನಬಹುದು ಆದ್ರೆ ಹೆಚ್ಚು ಜನ ಹೇಳೋದು ಚಿಕ್ಕಣ್ಣನ ಹೆಸರನ್ನ. ಯಾಕೆ ಹೇಳಿ ಅವ್ರೀಗ ಕಾಮೆಡಿಯಲ್ಲಿ ದೊಡ್ಡಣ್ಣ. ವರ್ಷದ 365 ದಿನಗಳು ಬಿಜಿಯಾಗಿರೋ ನಟ ಅಂದ್ರೆ ಚಿಕ್ಕಣ್ಣ. ಅಲ್ಲಿಗೆ ಅರ್ಥ ಮಾಡ್ಕೊಳಿ ಇವ್ರು ಅದೆಷ್ಟು ಬಿಜಿ ನಟರಾಗಿದ್ಧಾರೆ ಅಂತ.
ಯಾವುದೇ ಸ್ಟಾರ್ ಸಿನಿಮಾ ಆಗಲಿ ಹೊಸಬರ ಚಿತ್ರವಾಗಲಿ. ಅಲ್ಲಿ ಚಿಕ್ಕಣ್ಣ ಹಂಗ್ ಬಂದ್ ಹಿಂಗೋದ್ರೆ ಸಾಕು. ಸುಮ್ನೆ ಒಂದೆರಡು ಶಾಟಲ್ಲಿ ಕಣ್ಣು ಪಿಳಿ ಪಿಳಿ ಅಮತ ಮಿಟುಕಿಸಿ ಒಂದೆರಡು ಡಬಲ್ ಮೀನಿಂಗ್ ಡಯಲಾಗ್ ಹೊಡೆದ್ರೆ ಮುಗೀತು ಜನ ವಿಜಿಲ್ ಹಾಕೋದ್ ಗ್ಯಾರೆಂಟಿ. ಸಿನಿಮಾ ಮುಹೂರ್ತಕ್ಕೆ ಸ್ಟಾರ್ಗಳು ಬರ್ತಾರೆ. ಆದರೆ ಚಿಕ್ಕಣ್ಣ ಬರೊಲ್ಲ ಅಷ್ಟು ಬಿಜಿ ನಟ ಇವರು. ಮೂರು ಮೂರು ಶಿಫ್ಟ್ ಕೆಲಸ ಮಾಡುವ ಚಿಕ್ಕಣ್ಣ ದಿನಕ್ಕೆ ಇಷ್ಟು ಲಕ್ಷಗಳ ಮೇಲೆಯೇ ಸಂಭಾವನೆ ಪಡೆಯುತ್ತಿದ್ದಾರೆ.
ಅಂದಹಾಗೆ ಚಿಕ್ಕಣ್ಣ ಈಗ ಸ್ವೀಟ್ 30. ಮೂವತ್ತು ವರ್ಷದ ಗಂಡ್ ಹೈದಂಗೆ ಯಾರ್ ಮೇಲಾದ್ರೂ ಲವ್ವಾಗಿದಿಯಾ ಅಂತ ಸುವರ್ಣ ನ್ಯೂಸ್ ಕೇಳಿದಾಗ ಪ್ರೇಮ ವಿಷಯದ ಬಗ್ಗೆ ನಾಚಿ ನೀರಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.