
ಗಣಪ ಚಿತ್ರದ ನಾಯಕಿಯಾಗಿ, ಗಣೇಶ್ ತಂಗಿಯಾಗಿ ಕೆಲಕಾಲ ಕಣ್ದೂರವಾಗಿದ್ದ ಪ್ರಿಯಾಂಕ ಎಂಬ ಸುಂದರಿ ಸದ್ಯಕ್ಕೇನು ಮಾಡುತ್ತಿದ್ದಾರೆ? ಹುಡುಕುತ್ತಾ ಹೊರಟಾಗ ಸಿಕ್ಕ ಅವರ ಸದ್ಯದ ಜಾತಕ ಹೀಗಿದೆ:
'ಸದ್ಯಕ್ಕೆ ಸಿಂಪಲ್ ಸುನಿ ನಿರ್ದೇಶನದ ‘ಜಾನ್ ಸೀನ' ಚಿತ್ರದಲ್ಲಿ ನಟಿಸಿಸುತ್ತಿದ್ದು, ಇದರ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಉಳಿದಂತೆ ಕನ್ನಡದಲ್ಲೇ ಇಲ್ಲಿವರೆಗೂ ಆರು ಕತೆಗಳನ್ನು ಕೇಳಿದ್ದಾರೆ. ‘ಪಟಾಕಿ ನಂತರ ಕನ್ನಡದಲ್ಲಿ ಆರು ಕತೆಗಳನ್ನು ಕೇಳಿದ್ದೇನೆ. ಯಾವುದನ್ನೂ ಓಕೆ ಮಾಡಿಲ್ಲ. ಯಾಕೆಂದರೆ ‘ಜಾನ್ ಸೀನ' ತೆರೆಗೆ ಬರುವವರೆಗೂ ಕಾಯುತ್ತಿದ್ದೇನೆ. ಈ ನಡುವೆ ತಮಿಳಿನಲ್ಲೂ ಎರಡು ಚಿತ್ರಗಳಿಗೆ ಅವಕಾಶ ಬಂದಿದೆ' ಎನ್ನುತ್ತಾರೆ ಪ್ರಿಯಾಂಕ. ಅಂದಹಾಗೆ ತಮಿಳಿನಲ್ಲಿ ‘ತೇರಡಿ' ಹಾಗೂ ‘ಉತ್ತಮ ಮಹರಾಜ' ಎನ್ನುವ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವುಗಳ ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿವೆ. ಇವುಗಳ ಪೈಕಿ ಯಾವುದಾದರೊಂದು ಸಿನಿಮಾ ಬಿಡುಗಡೆ ಆದ ಮೇಲೆಯೇ ಬೇರೆ ಚಿತ್ರ ಒಪ್ಪಿಕೊಳ್ಳುವ ಯೋಚನೆ ಅಂತಾರೆ ಪ್ರಿಯಾಂಕಾ.
‘ವರ್ಷಕ್ಕೆ ಹತ್ತು ಸಿನಿಮಾ ಮಾಡಬೇಕೆಂದು ಅಂದುಕೊಳ್ಳುವ ನಟಿಯಲ್ಲ. ಸಂಖ್ಯೆಗಾಗಿ ಸಿನಿಮಾಗಳನ್ನು ಮಾಡುತ್ತ ಹೋದರೆ ನಮ್ಮ ಕರಿಯರ್ ಕಟ್ಟಿಕೊಳ್ಳುವುದಕ್ಕೆ ಆಗಲ್ಲ. ‘ಪಟಾಕಿ' ಚಿತ್ರದಲ್ಲಿ ತಂಗಿ ಪಾತ್ರ ಯಾಕೆ ಮಾಡೋದು ಅಂತ ಬಿಟ್ಟಿದ್ದರೆ ನನಗೆ ಕನ್ನಡದಲ್ಲಿ ಮತ್ತೆ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಪಟಾಕಿ ಗೆಲುವಿನಿಂದ ಸಿಗುತ್ತಿರುವ ಅವಕಾಶಗಳು ನೋಡಿ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಕತೆಯ ಹೊರತಾಗಿ ಬೇರೆದ್ದಕ್ಕೆ ನಾನು ಹೆಚ್ಚು ಮಹತ್ವ ಕೊಡಲ್ಲ' ಎನ್ನುವುದು ಪ್ರಿಯಾಂಕ ನಿಯಮ. ಪ್ರಿಯಾಂಕ ಅವರ ಪೂರ್ಣ ಹೆಸರು ಪ್ರಿಯಾಂಕ ತಿಮ್ಮೇಶ್. ಆ ಹೆಸರನ್ನೂ ಬದಲಿಸಿಕೊಂಡು ಮಾನ್ವಿತಾ ಆಗಿದ್ದರು. ಆದರೆ ಈಗಾಗಲೇ ‘ಕೆಂಡಸಂಪಿಗೆ' ಮಾನ್ವಿತಾ ಇರುವುದರಿಂದ ಪ್ರಿಯಾಂಕ ತಿಮ್ಮೇಶ್ ಹೆಸರೇ ಚಾಲನೆಯಲ್ಲಿದೆ.
-ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.