ಇದೆ ಮೊದಲ ಬಾರಿಗೆ ಆತಂಕದಲ್ಲಿ ಸಲ್ಮಾನ್ ಖಾನ್ ?

Published : Jun 22, 2017, 08:37 PM ISTUpdated : Apr 11, 2018, 01:05 PM IST
ಇದೆ ಮೊದಲ ಬಾರಿಗೆ ಆತಂಕದಲ್ಲಿ ಸಲ್ಮಾನ್ ಖಾನ್ ?

ಸಾರಾಂಶ

ಮೊದಲ ಬಾರಿಗೆ ಸಲ್ಲುಗೆ ಟೆನ್ಷನ್ ಆಗಿದೆ. ಇದಕ್ಕೆ ಕಾರಣ ಯಾವ್ದೋ ಗರ್ಲ್ ಫ್ರೆಂಡ್​ ಅಲ್ಲ

ಸಲ್ಮಾನ್ ಖಾನ್​ ಕೋಟಿಗಳ ಒಡೆಯ. ಹಣಕ್ಕೆ ಕೊರತೆ ಇಲ್ಲ, ಅಭಿಮಾನಗಳು ಇವರನ್ನು ಕಂಡರೆ ಪ್ರಾಣ ಬಿಡ್ತಾರೆ. ಆದರೆ  ಇದೇ ಮೊದಲ ಬಾರಿಗೆ ಸಲ್ಲುಗೆ ಟೆನ್ಷನ್ ಆಗಿದೆ. ಇದಕ್ಕೆ ಕಾರಣ ಯಾವ್ದೋ ಗರ್ಲ್ ಫ್ರೆಂಡ್​ ಅಲ್ಲ ಬದಲಿಗೆ ತಾನು ಅಭನಯಿಸಿರೋ ಸಿನಿಮಾ..

ಹೌದು, ಶುಕ್ರವಾರ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್'ಲೈಟ್ ಚಿತ್ರಬಿಡುಗಡೆ​ ಆಗುತ್ತಿದೆ. ಸಲ್ಮಾನ್ ಈ ಸಿನಿಮಾದಲ್ಲಿ ಎಂದಿನಂತೆ ಕಮರ್ಷಿಯಲ್ ಹೀರೋ ಅಲ್ಲ. ಸುಫರ್ ಹೀರೋನಂತೆ ಫೈಟಿಂಗ್ ಮಾಡೊಲ್ಲ. ಎಲ್ಲ ಚಿತ್ರಗಳಲ್ಲೂ ಹೊಡಿಬಡಿತ್ತಿದ್ದ ಇವರು ಈ ಬಾರಿ ಹೊಡಿಸಿಕೊಳ್ತಾರೆ. ಇಲ್ಲಿ ಸಲ್ಲುಗೆ ಕುಣಿಯೋಕೆ ರೊಮ್ಯಾನ್ಸ್ ಮಾಡೊಕೆ  ಕತ್ರಿನಾ, ಕರೀನಾ, ಜಾಕವೆಲಿನ್ ನಂತ ಬಳುಕೊ ಬಳ್ಳಿಯರು ಗ್ಲ್ಯಾಮರಸ್ ಹೀರೋಯಿನ್'ಗಳು ಇಲ್ಲ.

ಇದೆ ಕಾರಣ ಸಲ್ಮಾನ್​ಗೆ ತುಂಬಾ ಆತಂಕ ಎದುರಾಗಿದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ನಟನಿಗೆ ಸೋಲಿನ ಆತಂಕ ಅನುಮಾನ ಕಾಡುತ್ತಿದೆ. ಆದರೂ ಶುಕ್ರವಾರ ತೆರೆಕಾಣುತ್ತಿರುವ  ಟ್ಯೂಬ್​ಲೈಟ್​ನಲ್ಲಿ ಸಲ್ಲು ಮುಗ್ದ ಅಭಿನಯ ನೃತ್ಯ ಜೊತೆಗೆ ಸೆಂಟಿಮೆಂಟಲ್ ಆಕ್ಟಿಂಗ್ ನೋಡೊಕೆ ಸಿಗುತ್ತೆ.  ಅದೆನೆ ಇದ್ದರೂ ಸಿನಿಮಾನ ಜನ ಹೇಗೆ ತಗೊಳ್ತಾರೆ ಕಬೀರ್ ಖಾನ್ ಸಕ್ಸಸ್ ಸೂತ್ರ ಈ ಬಾರಿಯೂ ಗೆಲ್ಲುತ್ತಾ ನಾಳೆ ಗೊತ್ತಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

"ಅದು ಭಯಾನಕ, ನೋವಿನ ಕ್ಷಣವಾಗಿತ್ತು": ಕಾರು ಅಪಘಾತದ ಬಗ್ಗೆ ಮೌನ ಮುರಿದ 'ದಿಲ್‌ಬರ್' ಬೆಡಗಿ ನೋರಾ ಫತೇಹಿ
BBK 12: ಪಿತ್ತ ನೆತ್ತಿಗೇರಿತು; ಇದು ಸರಿಯಲ್ಲ ಎಂದು ಅಶ್ವಿನಿ ಗೌಡಗೆ ವಾರ್ನಿಂಗ್‌ ಕೊಟ್ಟ Kiccha Sudeep