
ಕರುಕ್ಷೇತ್ರದ ಮೈನ್ ಪಿಲ್ಲರ್ ದರ್ಶನ್'ಗೆ ಹೊಸ ಚಾಲೆಂಜ್ ಎದುರಾಗಿದೆ. ದರ್ಶನ್ 50 ನೇ ಚಿತ್ರ ಕುರುಕ್ಷೇತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ದುರ್ಯೋಧನ ಅಂಜನಾ ಬಹುಬಲಿಯಾಗೋಕ್ಕೆ 90 ಕೆಜಿ ತೂಕವನ್ನ ಹೆಚ್ಚಿಸಿಕೊಂಡಿದ್ದಾರೆ. ಈ ತೂಕವೇ ಈಗ ದರ್ಶನ್ಗೆ ಹೊಸ ಚಾಲೆಂಜೊಂದನ್ನ ಒಡ್ಡಿದೆ.
ಸದ್ಯ ಕುರುಕ್ಷೇತ್ರಕ್ಕಾಗಿ 90 ಕೆ.ಜಿ.ತೂಕವನ್ನ ಹೆಚ್ಚಿಸಿಕೊಂಡ ದರ್ಶನ್'ಗೆ ಹೊಸ ಚಾಲೆಂಜ್ ಕೊಟ್ಟಿದ್ದಾರೆ ನಿರ್ದೇಶಕ ಪವನ್ ಒಡೆಯರ್. ದರ್ಶನ್ 51 ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳ್ತಿದ್ದು,ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಚಿತ್ರಕ್ಕೆ ಒಡೆಯರ್ ಎಂದು ಶಿರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ದರ್ಶನ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಬೇಕಾಗಿದೆ. ಸದ್ಯ ಕುರುಕ್ಷೇತ್ರಕ್ಕಾಗಿ ಆಜಾನು ಬಾಹುಬಲಿಯಾಗಿರೋ ದಶರ್ನ್ ಮತ್ತೆ 90 ಕೆ.ಜಿ. ತೂಕ ಇಳಿಸಲು ಬೆಜಾನ್ ವರ್ಕೌಟ್ , ಡೈಯೆಟ್ ಎಲ್ಲಾ ಮಾಡ್ಬೇಕಾಗುತ್ತೆ.
ಜೆಸ್ಸಿ, ರಣವಿಕ್ರಮ ಅಂತಹ ಸಿನಿಮಾಗಳು ಪವನ್ ಒಡೆಯರ್ ಬತ್ತಳಿಕೆಯಲ್ಲಿ ಮೂಡಿಬಂದಿದ್ದು. ಇದೀಗ ಒಡೆಯರ್ ಸಿನಿಮಾ ಮಾಡ್ತಿದ್ದಾರೆ.ಈ ಚಿತ್ರ ಮುಂದಿನ ವರ್ಷ ಸೆಟ್ಟೆರಲಿದೆ. ಜೊತೆಗೆ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು, ಒಡೆಯರ್ ಚಿತ್ರದಲ್ಲಿ ದರ್ಶನ್ ಅವರನ್ನ ಸಖತ್ ಸ್ಟೈಲಿಶ್ ಆಗಿ ತೋರಿಸೋಕ್ಕೆ ಪವನ್ ದರ್ಶನ್'ಗೆ 90 ಕೆ.ಜಿ ಇಳಿಸೋ ದೊಡ್ಡ ಸವಾಲು ಕೊಟ್ಟಿದ್ದಾರೆ. ಈ ಲವರ್ ಬಾಯ್ ಇಮೇಜ್'ಗೆ ತಕ್ಕಂತೆ ಸ್ಲಿಮ್ ಆಗೋಕ್ಕೆ ದರ್ಶನ್ ಕುರುಕ್ಷೇತ್ರದ ಮುಗಿದ ಬಳಿಕ ಮತ್ತೆ ದೇಹದಂಡಿಸಬೇಕಾಗಿದೆ. ಸಿನಿಮಾಗಾಗಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ಳುವ ದರ್ಶನ್ ಡೇಡಿಕೇಷನ್ ನೋಡಿ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
-ಶೃತಿ, ಸುವರ್ಣ ನ್ಯೂಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.