ನಾಗಾರ್ಜುನ, ಕಮಲ್ ಬಳಿಕ ಶಿವಣ್ಣನ ಸರದಿ: ಸೀನಿಯರ್ ಹೀರೋಗಳ ಈ ಬದಲಾವಣೆಗೆ ಕಾರಣವೇನು?

Published : Nov 19, 2026, 07:43 PM IST
Senior Heroes Villains

ಸಾರಾಂಶ

ದಶಕಗಳ ಕಾಲ ಹೀರೋಗಳಾಗಿ ಮಿಂಚಿದ್ದ ನಾಗಾರ್ಜುನ, ಕಮಲ್ ಹಾಸನ್ ಮತ್ತು ಶಿವರಾಜ್‌ಕುಮಾರ್ ಈಗ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀನಿಯರ್ ಸ್ಟಾರ್‌ಗಳ ಈ ಹೊಸ ಅವತಾರ ಮತ್ತು ದಕ್ಷಿಣ ಭಾರತದ ಸಿನಿಮಾದಲ್ಲಿ ಶುರುವಾಗಿರುವ ಹೊಸ ಟ್ರೆಂಡ್ ಬಗ್ಗೆ ತಿಳಿಯಿರಿ.

ದಶಕಗಳ ಕಾಲ ಬೆಳ್ಳಿತೆರೆಯಲ್ಲಿ ನಾಯಕ ನಟರಾಗಿ ಮಿಂಚಿ, ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದ ಹಿರಿಯ ನಟರು ಈಗ ಖಳನಾಯಕನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಂದು ಕಾಲದಲ್ಲಿ ಹೀರೋಗಳಾಗಿ ಚಿತ್ರರಂಗವನ್ನು ಆಳಿದ್ದ ಈ ತಾರೆಯರು, ಈಗ ತಮ್ಮ ಇಮೇಜ್ ಬದಿಗಿಟ್ಟು ವಿಲನ್ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ನಾಯಕನಾಗಿ ಪ್ರೇಕ್ಷಕರ ಮನಗೆದ್ದಿದ್ದ ಕಲಾವಿದರು ಖಳನಾಯಕರಾಗಿ ಅಬ್ಬರಿಸುತ್ತಿರುವುದು ತೆಲುಗು ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ.

ಈ ಸಾಲಿನಲ್ಲಿ ಮೊದಲು ಕೇಳಿಬರುವ ಹೆಸರು ಕಿಂಗ್ ನಾಗಾರ್ಜುನ ಅವರದ್ದು. ಕಳೆದ ವರ್ಷ ಬಿಡುಗಡೆಯಾದ ಕೂಲಿ ಸಿನಿಮಾದಲ್ಲಿ ಸೈಮನ್ ಪಾತ್ರದ ಮೂಲಕ ಅವರು ತಮ್ಮದೇ ಶೈಲಿಯ ಸ್ಟೈಲಿಷ್ ವಿಲನಿಸಂ ಪ್ರದರ್ಶಿಸಿದ್ದರು. ಈ ಪಾತ್ರದ ಬಗ್ಗೆ ಮಾತನಾಡಿದ್ದ ನಾಗಾರ್ಜುನ, ಕೆಟ್ಟ ಹುಡುಗನಾಗಿ ತೆರೆಮೇಲೆ ಕಾಣಿಸಿಕೊಂಡರೆ ಹೇಗಿರುತ್ತದೆ ಎಂಬ ಕುತೂಹಲದಿಂದಲೇ ನೆಗೆಟಿವ್ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದರು.

ಅಭಿಮಾನಿಗಳಿಗೂ ಅಚ್ಚರಿ

ದಶಕಗಳ ಕಾಲ ರೊಮ್ಯಾಂಟಿಕ್ ಹೀರೋ ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ನಾಗಾರ್ಜುನ, ದಿಢೀರ್ ಖಳನಾಯಕನಾಗಿ ಕಾಣಿಸಿಕೊಂಡು ತಮ್ಮೊಳಗಿನ ವಿಭಿನ್ನ ನಟನೆಯನ್ನು ಅನಾವರಣಗೊಳಿಸಿದ್ದರು. ಅವರ ಈ ಹೊಸ ಅವತಾರ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತ್ತು. ಇನ್ನು ಉಲಗನಾಯಗನ್ ಕಮಲ್ ಹಾಸನ್ ಕೂಡ ಖಳನಾಯಕನ ಪಾತ್ರದಲ್ಲಿ ಈಗಾಗಲೇ ತಮ್ಮ ತಾಕತ್ತು ತೋರಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದ ಸುಪ್ರೀಂ ಯಾಸ್ಕಿನ್ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.

ಡೆರ್ ಡೆವಿಲ್ ಸಿನಿಮಾದಲ್ಲಿ ಖಳನಾಯಕ

ಭಯ ಹುಟ್ಟಿಸುವಂತಹ ಅವರ ನೆಗೆಟಿವ್ ಪಾತ್ರ ಚಿತ್ರಕ್ಕೆ ಮತ್ತೊಂದು ಆಯಾಮ ನೀಡಿತ್ತು. ಇದೀಗ ಈ ಪಟ್ಟಿಗೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಕನ್ನಡಿಗರು ದೇವರಂತೆ ಆರಾಧಿಸುವ ಶಿವಣ್ಣ, ಡೆರ್ ಡೆವಿಲ್ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿರುವ ಅವರು, ವಿಲನ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ಈಗಾಗಲೇ ಮೂಡಿದೆ.

ಇನ್ನು ಹೀರೋ ಇಮೇಜ್‌ಗೆ ಸೀಮಿತವಾಗದೆ ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಹಿರಿಯ ನಟರು ಮುಂದಾಗಿದ್ದಾರೆ. ನಾಯಕನಾಗಿ ಪ್ರೀತಿಸಲ್ಪಟ್ಟ ತಾರೆಯರು ಖಳನಾಯಕರಾಗಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಈ ಹೊಸ ಪ್ರಯೋಗ ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನ್ನ ಫೇವರಿಟ್ ಮ್ಯಾಜಿಕ್'.. ಕಾವ್ಯಾ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ಅನಿರುಧ್
ಮಗಳ ಬೆಂಬಲಕ್ಕೆ ಆಕ್ಷನ್ ಕಿಂಗ್ ಖಡಕ್ ನಿಲುವು: ಸುಳ್ಳು ಆರೋಪಗಳ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ