
ಬೆಂಗಳೂರು (ಸೆ.20): ಬೆಳ್ಳಿ ತೆರೆ ಮೇಲೆ ಜೂಲಿ ಕಾಲ ಮತ್ತೆ ಶುರುವಾಗಿದೆ. 70 ದಶಕದಲ್ಲಿ ಬಂದು ಹೋಗಿದ್ದ ಈಕೆ ಅಂದಿನ ಯುವಕರ ಮನದಲ್ಲಿ ಹಸಿಬಿಸಿ ದೃಶ್ಯ ಉಳಿಸಿ ಹೋಗಿದ್ದಳು. ಈಗ ಅವರೆಲ್ಲ ಇದ್ದಾರೋ ಇಲ್ಲವೋ ಆದರೆ ಜೂಲಿ ಇದ್ದಾಳೆ. ಆಕೆಯ ಪಾತ್ರ ಕಾಲಕ್ಕೆ ತಕ್ಕನಾಗಿ ಮಾಡರ್ನ್ ಆಗಿದೆ. ಬಿಕಿನಿ ತೊಟ್ಟು ಆಕೆ ಸಮುದ್ರ ತೀರದಲ್ಲಿ ಓಡಾಡಿದರೆ ಸಾಕು. ಹೃದಯ ರೋಮಾಂಚನಗೊಳ್ಳುತ್ತದೆ. ಆ ಜೂಲಿಯ ಹವಾ ಈಗ ಬಾಲಿವುಡ್ ಅಂಗಳದಲ್ಲಿ ಹೊಸ ಹುಚ್ಚು ಹಿಡಿಸಿದೆ.
ಈಕೆ ಚಿತ್ರದಲ್ಲಿ ಹಸಿಬಿಸಿಯ ದೃಶ್ಯಕ್ಕೇನೂ ಕೊರತೆಯಿರುವುದಿಲ್ಲ. ಇದಕ್ಕೆ ಮೊನ್ನೆ ಬಿಟ್ಟ ಟೀಸರೇ ಹಾಟ್ ಎಕ್ಸಾಂಪಲ್! ಚಿತ್ರದಲ್ಲಿ ಜೂಲಿ ಲುಕ್ ಚೆನ್ನಾಗಿದೆ. ಹೀರೋ ಥರ ಈಕೆಗೆ ಒಂದು ಇಂಟ್ರಡಕ್ಷನ್ ಸಾಂಗ್ ಇದೆ. ಬೈಕ್ ರೈಡ್ ಮಾಡ್ತಾನೇ, ತನ್ನನ್ನೇ ತಾನು ಗುಣಗಾನ ಮಾಡಿಕೊಳ್ತಾಳೆ. ಜೂಲಿ-2 ಚಿತ್ರದಲ್ಲಿ ಲಕ್ಷ್ಮೀ ರೈ ಓಪನ್ ಆಗಿಯೇ ಅಭಿನಯಿಸಿದ್ದಾರೆ. ಇದು ತಮ್ಮ ಚಿತ್ರ ಜೀವನದ 50 ಚಿತ್ರವೂ ಹೌದು. ಪಾತ್ರಕ್ಕಾಗಿಯೇ 10 ರಿಂದ 11 ಕೆ.ಜಿ.ತೂಕವೂ ಇಳಿಸಿದ್ದಾಗಿದೆ.96 ವಿಭಿನ್ನ ಕಾಸ್ಟೂಮ್ ಧರಿಸಿದ್ದಾರೆ. ಜೂಲಿ-2 ಸಿನಿಮಾ ಬಾಲಿವುಡ್ ನಲ್ಲಿ ಹೊಸ ಕಿಚ್ಚು ಹಚ್ಚಿದೆ. ನಿರ್ದೇಶಕ ದೀಪಕ್ ಶಿವದಾಸಾನಿ ಕಾಂಟ್ರವರ್ಸಿ ಸಬ್ಜೆಕ್ಟನ್ನೇ ತಂದಿದ್ದಾರೆ. ಅಕ್ಟೋಬರ್ 06 ರಂದು ಚಿತ್ರ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.