
ಮನೆಯೊಳಗೆ ಜಂಕ್‌ಫುಡ್ ತಿನ್ನಂಗಿಲ್ಲ!
‘ಅಮ್ಮ ಮನೆಯೊಳಗೆ ಜಂಕ್‌ಫುಡ್ ತರೋಕೆ ಬಿಡಲ್ಲ. ಅದು ಒಳ್ಳೆಯದಲ್ಲ ಅಂತ ಗೊತ್ತಾದಮೇಲಿಂದ ನಾನೂ ಹತ್ರ ಸೇರಿಸಲ್ಲ.’ ಅನ್ನೋ ಅನನ್ಯಾ ಪಿಪ್ಸಿ,ಕೋಲಾದಂಥ ಡ್ರಿಂಕ್‌ಗಳತ್ತ ಕಣ್ಣೆತ್ತಿಯೂ ನೋಡಲ್ಲ. ದೊಡ್ಡ ಕರುಳಿನ ಸಮಸ್ಯೆ ಇರಿಟೇಬಲ್ ಬವೆಲ್ ಸಿಂಡ್ರೋಮ್ ಇರುವ ಕಾರಣ ಡೈರಿ ಉತ್ಪನ್ನಗಳಿಂದ ದೂರವಿದ್ದಾರೆ. ಬೆಳಗ್ಗೆ ೮ ಗಂಟೆಗೆಲ್ಲ ಬ್ಲೂಬೆರ‌್ರಿ ಸ್ಮೂದಿ ಕುಡೀತಾರೆ. ಇಲ್ಲವಾದರೆ ಮಸಾಲೆ ಚಾಯ್ ಬೆಳಗಿನ ಸಾಥಿ. ಸಸ್ಯಾಹಾರ ಈಕೆಗಿಷ್ಟ. ಮಧ್ಯಾಹ್ನ ಅವಕಾಡೊ ಜೊತೆಗೆ ಬ್ರೌನ್‌ರೈಸ್ ಊಟ. ಆಗಾಗ ನಟ್ಸ್ ತಿನ್ನೋ ರೂಢಿ. ಉಳಿದಂತೆ ಮಿತಾಹಾರ ಪ್ರಿಯೆ.
ಹೈಟ್: 5'6
ತೂಕ: 55kg
ಸುತ್ತಳತೆ: 36-24-34
ಟ್ರೆಡ್‌ಮಿಲ್ ಮೇಲೂ ಹಾಡು
ಜಿಮ್‌ನಲ್ಲಿ ಅನನ್ಯಾ ಇದ್ದಾರೆ ಅಂದರೆ ಮ್ಯೂಸಿಕ್ ಪ್ಲೇ ಆಗ್ತಾ ಇರುತ್ತೆ. ಅದು ರೆಕಾರ್ಡೆಡ್ ಅಲ್ಲ. ಟ್ರೆಡ್‌ಮಿಲ್ ಮೇಲೆ ಓಡ್ತಾ ಹಾಡು ಹೇಳೋದು ಅನನ್ಯಾ ಖಯಾಲಿ. ಹೀಗೆ ಮಾಡಿದರೆ ಸ್ಟೇಜ್ ಮೇಲೆ ಹಾಡುವಾಗ ಉಸಿರಿನ ಮೇಲೆ ಕಂಟ್ರೋಲ್ ಇರುತ್ತಂತೆ. ದಿನಕ್ಕೆ ಒಂದೂವರೆ ಗಂಟೆ ವರ್ಕ್‌ಔಟ್ ಮಾಡೋ ಅನನ್ಯಾ, ಸ್ನಾಯುಗಳ ಬಲ ಹೆಚ್ಚಿಸಲು ಕೆಲವು ಎಕ್ಸರ್‌ಸೈಸ್ ಮಾಡುತ್ತಾರೆ. ಮೊದಲು ಕೊಂಚ ಗುಂಡಗಿದ್ದ ಹುಡುಗಿ ಈ ಪರಿ ವರ್ಕೌಟ್ ಮಾಡಲು ಶುರು ಮಾಡಿದ ಮೇಲೆ ಸಣ್ಣಗಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.