
ವಾಷಿಂಗ್ಟನ್(ಜೂ.10): ಹೆಸರಾಂತ ಹಾಲಿವುಡ್ ನಟಿ, ಪ್ರಥಮ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ಕೊನೆಯುಸಿರೆಳೆದಿದ್ದಾರೆ. ಕಳೆದ ಜೂನ್ 8ರಂದು ೯೦ ವರ್ಷದ ಗೇಸನ್ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
1962ರಲ್ಲಿ ತೆರೆಕಂಡ "ಜೇಮ್ಸ್ ಬಾಂಡ್"ಫ್ರ್ಯಾಂಚೈಸ್ ಸ್ಟಾರ್ಟರ್ ‘ಡಾ ನೋ’ ನಲ್ಲಿ ಶೇನ್ ಕಾನರಿ ಜೊತೆ ‘ಬಾಂಡ್ ಗರ್ಲ್’ ಆಗಿ ಕಾಣಿಸಿಕೊಂಡಿದ್ದ ಗೇಸನ್, ಭಾರೀ ಜನಮನ್ನಣೆ ಗಳಿಸಿದ ಹಾಲಿವುಡ್ ನಟಿಯರ ಪೈಕಿ ಮೊದಲಿಗರಾಗಿದ್ದರು.
‘ಡಾ ನೋ' ಮತ್ತು 'ಫ್ರಮ್ ರಷ್ಯಾ ವಿತ್ ಲವ್’ ನಲ್ಲಿ ಶೇನ್ ಕಾನರಿ ಜೊತೆ ತೆರೆ ಹಂಚಿಕೊಂಡಿದ್ದ ಗೇಸನ್, ಶೇನ್ ಕಾನರಿ ಅವರಷ್ಟೇ ಜನಪ್ರೀಯತೆಯನ್ನು ಗಳಿಸಿದ್ದರು. ಗೇಸನ್ ಬಾಂಡ್ ಸರಣಿಯ ಎರಡು ಚಿತ್ರಗಳಲ್ಲಿ ಖಾಣಿಸಿಕೊಂಡ ಏಕೈಕ ಬಾಂಡ್ ಗರ್ಲ್ ಆಗಿದ್ದರೆನ್ನುವುದು ವಿಶೇಷ.
ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊ ಜೇಮ್ಸ್ ಬಾಂಡ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಮೊಟ್ಟಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ವಿಧಿವಶರಾಗಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ’ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.