ಅಭಿಮಾನಿಯ ‘ಟೇಸ್ಟ್’ ಮೆಚ್ಚಿದ ರಾಧಿಕಾ..!

Published : Jun 09, 2018, 07:01 PM IST
ಅಭಿಮಾನಿಯ ‘ಟೇಸ್ಟ್’ ಮೆಚ್ಚಿದ ರಾಧಿಕಾ..!

ಸಾರಾಂಶ

ಆಟೋ ಮೇಲೆ ರಾಧಿಕಾ ಸಿಗರೇಟ್ ಸೇದುತ್ತಿರುವ ಫೋಟೋ ವಿಭಿನ್ನ ಪಾತ್ರಗಳನ್ನೂ ಇಷ್ಟಪಡುವ ಅಭಿಮಾನಿಗಳಿಗೆ ರಾಧಿಕಾ ಥ್ಯಾಂಕ್ಸ್ ಆಟೋದ ಫೋಟೋ ಎಫ್ ಬಿ ಯಲ್ಲಿ ಶೇರ್ ಮಾಡಿದ ರಾಧಿಕಾ 

ಬೆಂಗಳೂರು(ಜೂ.9): ಚಂದನವನದ ಸುಂದರಿ ರಾಧಿಕಾ ಪಂಡಿತ್ ಫೂಲ್ ಖುಷಿಯಲ್ಲಿದ್ದಾರೆ. ಹಾಗಂತ ಪತಿ ಯಶ್ ಏನಾದ್ರೂ ಗಿಫ್ಟ್ ಕೊಟ್ರಾ ಅಂತಾ ತಿಳ್ಕೋಬೇಡಿ. ರಾಧಿಕಾ ಅಭಿಮಾನಿಯೊಬ್ಬ ಅವರ ಇಷ್ಟದ ಫೋಟೋವೊಂದನ್ನು ತನ್ನ ಆಟೋ ಮೇಲೆ ಹಾಕಿಕೊಂಡಿದ್ದೇ ಅವರ ಖುಷಿಗೆ ಕಾರಣವಂತೆ.

ಹೌದು, ರಾಧಿಕಾ ಅಭಿಮಾನಿಯೊಬ್ಬ ಅವರ ಅಭಿನಯದ ರಾಮಾಚಾರಿ ಚಿತ್ರದ ಫೋಟೋವೊಂದನ್ನು ತನ್ನ ಆಟೋ ಹಿಂದೆ ಅಂಟಿಸಿದ್ದಾನೆ. ಇದು ಅಂತಿಂತ ಫೋಟೋ ಅಲ್ಲ. ರಾಧಿಕಾ ಸಿಗರೇಟ್ ಸೇದುತ್ತಿರುವ ಫೋಟೋ ಇದಾಗಿದ್ದು, ಖುದ್ದು ರಾಧಿಕಾ ಈ ಆಟೋದ ಫೋಟೋ ಶೇರ್ ಮಾಡಿದ್ದಾರೆ.

ಅಭಿಮಾನಿಗಳು ನಮ್ಮನ್ನು ತರಹೇವಾರಿ ಅವತಾರದಲ್ಲಿ ಇಷ್ಟಪಡುತ್ತಾರೆ ಎಂಬುದೇ ಖುಷಿಯ ವಿಚಾರ ಎಂದು ಹೇಳಿರುವ ರಾಧಿಕಾ, ಅಭಿಮಾನಿಗಳು ತಮಗೆ ತೋರಿಸಿದ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಆಟೋ ಚಾಲಕನ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ , ಆತನ ಅಭಿಮಾನಕ್ಕೆ ಮನಸೋತಿರುವುದಾಗಿ ರಾಧಿಕಾ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?