ವನ್ಯಸಂಕುಲಕ್ಕೆ ಬೆಂಕಿ.. ನೆರವಿಗೆ ಧಾವಿಸಿದ ದಚ್ಚು, ವಿಜಯ್, ಗಣೇಶ್

By Web Desk  |  First Published Feb 24, 2019, 7:48 PM IST

ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದಾರೆ.


ಬೆಂಗಳೂರು[ಫೆ. 24] ಬಂಡೀಪುರದ  ಅವಘಡದ ಬಗ್ಗೆ ಸಿನಿಮಾ ನಾಯಕರು ದನಿ ಎತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.

ಬಂಡಿಪುರದ ಬಗ್ಗೆ ಕ್ಷಣ‌ಕ್ಷದ ಮಾಹಿತಿಯನ್ನು ದರ್ಶನ್ ಪಡೆದುಕೊಳ್ಳುತ್ತಿದ್ದಾರೆ. ನಾಯಕರು ಸೋಶಿಯಲ್ ಮೀಡಿಯಾದ ಮೂಲಕ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯ ರಾಯಭಾರಿ ಆಗಿರುವ  ಚಾಲೆಂಜಿಂಗ್ ಸ್ಟಾರ್ ಮೊದಲ ಹೆಜ್ಜೆ ಇಟ್ಟಿದ್ದು  ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ವನ್ಯಜೀವಿ ಸಂಕುಲಕ್ಕೆ ಸಾಕಷ್ಟು ತೊಂದರೆಯುಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ

Tap to resize

Latest Videos

ಬೆಂಕಿಯ ಕೆನ್ನಾಲಿಗೆ ಬಂಡೀಪುರದಲ್ಲಿ ಆಕ್ರಮಿಸಿದ ರೀತಿ

ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 

ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ pic.twitter.com/ES0ZsB6Eap

— Darshan Thoogudeepa (@dasadarshan)

ಬಂಡೀಪುರ ಅರಣ್ಯದಲ್ಲಿನ ಕಾಡ್ಗಿಚ್ಚಿನಿಂದ ನಮ್ಮ ಅಮೂಲ್ಯವಾದ ಅರಣ್ಯ ಸಂಪತ್ತು,ವನ್ಯಜೀವಿಗಳು ಸಂಕಷ್ಟಕ್ಕೀಡಾಗಿದ್ದು ತುಂಬಾ ನೋವಾಗಿದೆ. ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರು ಕಾರ್ಯನಿರತರಾಗಿರುವುದು ಶ್ಲಾಘನೀಯ. ಇತ್ತೀಚೆಗೆ ಸಂಭವಿಸುತ್ತಿರುವ ಅಗ್ನಿ ಅನಾಹುತಗಳು ವಿಷಾದನೀಯ. ನಮ್ಮ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಹೊಣೆ ನಮ್ಮ ಕೈಯಲ್ಲಿದೆ. pic.twitter.com/suaXBW2F3C

— Ganesh (@Official_Ganesh)
click me!