ನಟಿ ರವೀನಾ ಟಂಡನ್ ವಿರುದ್ಧ ದೂರು ದಾಖಲು

By Suvarna Web DeskFirst Published Mar 7, 2018, 2:02 PM IST
Highlights

ನಟಿ ರವೀನಾ ಟಂಡನ್ ವಿರುದ್ಧ ದೂರು ದಾಖಲಾಗಿದೆ. ಒಡಿಶಾದ  ದೇವಾಲಯವೊಂದರಲ್ಲಿ ಕ್ಯಾಮರಾ ನಿಷೇಧಿತ ಪ್ರದೇಶದಲ್ಲಿ ಜಾಹಿರಾತನ್ನು ಶೂಟ್ ಮಾಡಿದ್ದಾರೆ ಎಂದು  ಅವರ ವಿರುದ್ಧ ದೂರು  ದಾಖಲು ಮಾಡಲಾಗಿದೆ.  

ಮುಂಬೈ : ನಟಿ ರವೀನಾ ಟಂಡನ್ ವಿರುದ್ಧ ದೂರು ದಾಖಲಾಗಿದೆ. ಒಡಿಶಾದ  ದೇವಾಲಯವೊಂದರಲ್ಲಿ ಕ್ಯಾಮರಾ ನಿಷೇಧಿತ ಪ್ರದೇಶದಲ್ಲಿ ಜಾಹಿರಾತನ್ನು ಶೂಟ್ ಮಾಡಿದ್ದಾರೆ ಎಂದು  ಅವರ ವಿರುದ್ಧ ದೂರು  ದಾಖಲು ಮಾಡಲಾಗಿದೆ.  

ಈ ದೇವಾಲಯದಲ್ಲಿ ಕ್ಯಾಮರಾಗೆ ಅವಕಾಶ ಇಲ್ಲದಿದ್ದರೂ ಇಲ್ಲಿಗೆ ಕ್ಯಾಮೆರಾ ತಂದು ಶೂಟ್ ಮಾಡಿದ ಹಿನ್ನೆಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಭುನೇಶ್ವರ ಪೊಲೀಸರು ಹೇಳಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀನಾ ಟಂಡನ್ ದೇವಾಲಯದಲ್ಲಿ ಯಾವುದೇ ರೀತಿಯಾದ ಜಾಹಿರಾತನ್ನು ಶೂಟ್ ಮಾಡಿಲ್ಲ. ಇದು ಯಾವುದೇ ಏಜೆನ್ಸಿಯೂ ಅಲ್ಲ, ಶೂಟಿಂಗ್ ಕೂಡ ನಡೆದಿಲ್ಲ. ಇಲ್ಲಿ ಕೆಲ ಮಾಧ್ಯಮಗಳು, ಕೆಲ ಸ್ಥಳೀಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಅಲ್ಲದೇ ಇಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ನಿಷೇದವಿದೆ ಎನ್ನುವ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಾನು ದೇವಾಲಯಕ್ಕೆ ಹೋದಾಗ ನನ್ನ ಸುತ್ತ ಜನರು ಸುತ್ತುವರಿದು ಸೆಲ್ಫಿ ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

click me!