ಅನುಷ್ಕಾ, ಪ್ರಭಾಸ್ ಮದುವೆಯಾಗ್ತಾರಾ? ಪ್ರಭಾಸ್ ಹುಟ್ಟುಹಬ್ಬಕ್ಕೆ ಅನುಷ್ಕಾ ಕೊಟ್ಟ ಗಿಫ್ಟೇನು?
ಬೆಂಗಳೂರು (ಅ. 24): ಪ್ರಭಾಸ್, ಅನುಷ್ಕಾ ಶೆಟ್ಟಿ ನಡುವೆ ಕುಚ್ ಕುಚ್ ಹೋ ರಹಾ ಹೈ ಅನ್ನೋ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಸಂಬಂಧವನ್ನು ಅನುಷ್ಕಾ, ಪ್ರಭಾಸ್ ನಿರಾಕರಿಸಿದ್ದಾರೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.
ನಿನ್ನೆ ಪ್ರಭಾಸ್ ಬರ್ತಡೇ ಹಿನ್ನಲೆಯಲ್ಲಿ ಅನುಷ್ಕಾ ವಿಶ್ ಗಾಗಿ ಅಭಿಮಾನಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಅನುಷ್ಕಾ, ಪ್ರಭಾಸ್ ಗೆ ಸಂದೇಶ ಕಳುಹಿಸಿದ್ದಾರೆ.
ಈ ವೇಳೆ ಆಕೆಯ ಅಭಿಮಾಣಿಗಳೆಲ್ಲಾ ಪ್ರಭಾಸ್ ರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಆದರೆ ಇವರಿಬ್ಬರು ಬಾಯಿ ಬಿಟ್ಟಿಲ್ಲ.