ಹೃದಯಾಘಾತದಿಂದ ಸಾವಿಗೀಡಾದ ಅಭಿಮಾನಿ ನೆನೆದು ಭಾವುಕರಾದ ಶಿವಣ್ಣ!

Published : Jul 04, 2019, 02:11 PM ISTUpdated : Jul 04, 2019, 02:19 PM IST
ಹೃದಯಾಘಾತದಿಂದ ಸಾವಿಗೀಡಾದ ಅಭಿಮಾನಿ ನೆನೆದು ಭಾವುಕರಾದ ಶಿವಣ್ಣ!

ಸಾರಾಂಶ

ನಟ ಶಿವರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಕಶ್ಯಪ್‌ ಸಿಂಹ ಹೃದಯಾಘಾತದಿಂದ ವಿಧಿವಶರಾಗಿದ್ದು, ಶಿವಣ್ಣ ತನ್ನ ನೆಚ್ಚಿನ ಅಭಿಮಾನಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

(ಬೆಂಗಳೂರು. ಜೂಲೈ 03):  ಹ್ಯಾಟ್ರಿಕ್ ಹೀರೋ ಅಂದ್ರೆ ಸುಮ್ನೆನಾ? ಅಭಿಮಾನಿಗಳೇ ದೇವರೆಂದು ಹೇಳುತ್ತಾ ಅದಕ್ಕೆ ತಕ್ಕಂತೆ ನಡೆದುಕೊಂಡವರು. ನಟನೆಂದ ಮೇಲೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಆ ಸಾವಿರದಲ್ಲೊಬ್ಬರು ನೆಚ್ಚಿನ ಅಭಿಮಾನಿ ಇದ್ದೇ ಇರುತ್ತಾರೆ. ಅಂತಹ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಶಿವಣ್ಣಗೆ ಅಪ್ಪಟ ಅಭಿಮಾನಿಯಾಗಿದ್ದ ಕಶ್ಯಪ್‌ ಟಿವಿಎಸ್ ಮೋಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೃದಯಾಘಾತದಿಂದ ಬೆಂಗಳೂರಿನ ಶ್ರೀನಗರದ ನಿವಾಸದಲ್ಲಿ ಬುಧವಾರ ವಿಧಿವಶರಾಗಿದ್ದಾರೆ. ಅಭಿಮಾನಿ ಸಾವಿಗೆ ಶಿವಣ್ಣ ಸಂತಾಪ ಸೂಚಿಸಿದ್ದಾರೆ.

ಶಿವರಾತ್ರಿಯಂದು ಡಾ.ರಾಜ್ ಸ್ಮರಿಸಿದ ಶಿವಣ್ಣ!

'ನಮ್ಮ ಅಭಿಮಾನಿ ಕಶ್ಯಪ್ ಸಿಂಹ ನಮ್ಮಿಂದ ದೂರ ಆಗಿದ್ದಾರೆ. ಈ ಸುದ್ದಿ ಕೇಳಿ ಬಹಳ ನೋವುಂಟಾಗಿದೆ. ಆ ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ. ನಿಮ್ಮ ಮನೆಯವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಒಬ್ಬ ಅಭಿಮಾನಿಯನ್ನು ಕಳೆದುಕೊಂಡ ನೋವು ಅವರನ್ನು ಪ್ರೀತಿಸುವವರಿಗೆ ಮಾತ್ರ ಗೊತ್ತಾಗುತ್ತದೆ. ಕಶ್ಯಪ ಸಿಂಹ ನೀನು ತೋರಿಸಿದ ಪ್ರೀತಿ, ಅಭಿಮಾನ, ಪಿಚ್ಚರ್ ನೋಡಿ ಕೊಂಡಾಂಡಿದ್ದನ್ನು ಯಾವತ್ತು ಮರೆಯೋಕೆ ಆಗಲ್ಲ. ನೀನು ಎಂದಿಗೂ ನನ್ನ ಮನದಲ್ಲಿರುತ್ತೀಯ. ನಿನ್ನ ಆಶೀರ್ವಾದ ನನ್ನ ಮೇಲಿರಲಿ' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್