ನೋಡ್ರಪ್ಪಾ..! ದಶಕದ ಹಿಂದೆಯೇ FaceApp ಬಳಸಿದ್ರು ಸ್ಮೃತಿ ಇರಾನಿ!

Published : Jul 18, 2019, 04:25 PM IST
ನೋಡ್ರಪ್ಪಾ..! ದಶಕದ ಹಿಂದೆಯೇ FaceApp ಬಳಸಿದ್ರು ಸ್ಮೃತಿ ಇರಾನಿ!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ ಫೇಸ್ಆ್ಯಪ್ | ಹತ್ತು ವರ್ಷದ ಹಿಂದೆ ಮಾಡಿದ್ರು ಸ್ಮೃತಿ ಇರಾನಿ | 

ಸೋಷಿಯಲ್ ಮೀಡಿಯಾದಲ್ಲಿ ಫೇಸ್ ಆ್ಯಪ್ ಅಬ್ಬರ ಜೋರಾಗಿದೆ. ಎಲ್ಲರೂ ಫೇಸ್ ಆ್ಯಪ್ ಹಿಂದೆ ಬಿದ್ದಿದ್ದಾರೆ. ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಲ್ಲಿ ಈ ಆ್ಯಪ್ ಫೋಟೋಗಳೇ ತುಂಬಿವೆ. ಎಲ್ಲರಿಗೂ ತಾವೂ ವಯಸ್ಸಾದ ಮೇಲೆ ಹೇಗೆ ಕಾಣಿಸುತ್ತೇವೆ ಎಂಬ ಕುತೂಹಲ. 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಟ್ರೆಂಡ್ ಗಳಿಗೆ ಬೇಗ ಸ್ಪಂದಿಸುತ್ತಾರೆ. ಫೇಸ್ ಆ್ಯಪ್ ಗೆ ತಾವೂ ಏನೂ ಕಮ್ಮಿಯಿಲ್ಲ ಎಂಬಂತೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 

 

ಕ್ಯೂಕಿ ಸಾಸ್ ಭಿ ಕಭಿ ಬಹು ಥೀ ಸೀರಿಯಲ್ ನಲ್ಲಿ ಸ್ಮೃತಿ ಇರಾನಿ ತುಳಸಿ ವೀರಾನಿ ಪಾತ್ರ ಮಾಡಿದ್ದರು. ಇದು ಅವರಿಗೆ ಬಿಗ್ ಹಿಟ್ ತಂದು ಕೊಟ್ಟಿತ್ತು. ಬಹಳ ವರ್ಷವಾದ ಮೇಲೆ ಈ ಪಾತ್ರ ಹೇಗೆ ಕಾಣಿಸುತ್ತದೆಂಬ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 

ಫೇಸ್ ಆ್ಯಪ್ ಚಾಲೆಂಜ್ ಗಿಂತ ಮುಂಚೆನೇ ಏಕ್ತಾ ಕಪೂರ್ ಇದನ್ನು ಮಾಡಿದ್ದರು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸ್ಮೃತಿ ಸೆನ್ ಆಫ್ ಹ್ಯೂಮರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss 13ರ ಮತ್ತೊಂದು ಬಿಗ್​ ಅಪ್​ಡೇಟ್​ ಕೊಟ್ಟ ನಟ ಸೂರಜ್​ ಸಿಂಗ್​- ಛಾನ್ಸ್​ ಮಿಸ್​ ಮಾಡ್ಲೇಬೇಡಿ
Jodi No 1: ಬೆಡ್​ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ