
ಮುಂಬೈ [ಫೆ.01] ಜಯಪ್ರದಾ ಒಂದು ಸಂದರ್ಭ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದರಂತೆ. ಅದಕ್ಕೇನು ಕಾರಣ ಎಂಬುದನ್ನು ಅವರೆ ಹೇಳಿದ್ದಾರೆ. ಅವರ ಮಾತುಗಳಲ್ಲೇ ಕೇಳಿಕೊಂಡು ಬನ್ನಿ
ಹಿರಿಯ ಸಮಾಜವಾದಿ ನಾಯಕ ಅಮ್ ಸಿಂಗ್ ಅವರನ್ನು ನನ್ನ ಗಾಡ್ ಫಾದರ್ ಎಂದೇ ಭಾವಿಸಿರುವೆ. ಆದರೆ ಜನರು ನನ್ನ ಮತ್ತು ಅಮರ್ ಸಿಂಗ್ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ನಾನು ಎಂದು ಅಮ್ ಸಿಂಗ್ ಅವರಿಗೆ ರಾಖಿ ಕಟ್ಟಿದೆನೋ ಅಂದಿಗೆ ಮಾತುಕತೆ ನಿಂತಿತು.
ಫೋಟೋ ಶೂಟ್‌ಗಾಗಿ ಎದೆಗೆ ಬ್ರೀಸ್ಟ್ ಪಂಪ್ ಧರಿಸಿದ ಮಾಡಲ್!
ಸಮಾಜವಾದಿ ಪಾರ್ಟಿಯ ಶಾಸಕ ಅಜಮ್ ಖಾನ್ ನನ್ನ ಮೇಲೆ ಆಸಿಡ್ ದಾಳಿ ಮಾಡುವ ಸಂಚು ರೂಪಿಸಿದ್ದರು. ಒಟ್ಟಿನಲ್ಲಿ ಎಲ್ಲ ಕಡೆ ಹರಡಿದ್ದ ನೆಗೆಟಿವ್ ವಿಚಾರಗಳು ನನ್ನನ್ನು ಆತ್ಮಹತ್ಯೆ ಕಡೆ ತೆಗೆದುಕೊಂಡು ಹೋಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ನನಗೆ ಸಂಬಂಧಿಸಿದ ಕೆಲ ಎಡಿಟ್ ಮಾಡಿದ್ದ ಚಿತ್ರಗಳು ವೈರಲ್ ಆಗಿದ್ದವು. ನನ್ನ ಕ್ಷೇತ್ರದಲ್ಲಿಯೇ ನಾನು ತಲೆ ಎತ್ತಿ ಓಡಾಡದ ಸ್ಥಿತಿ ಅನಿವಾಋ್ಯವಾಗಿ ನಿರ್ಮಾಣ ಆಗಿತ್ತು. ನಾನು ಸಂಪೂರ್ಣ ಕುಸಿದು ಹೋಗಿದ್ದೆ. ಆತ್ಮಹತ್ಯೆಯೊಂದೆಮ ಪರಿಹಾರ ಎಂದು ಭಾವಿಸಿದ್ದೆ.
ಈ ಸಂದರ್ಭ ಅಮರ್ ಸಿಂಗ್ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಪಡೆದು ಹಿಂದಿರುಗಿದ ಸಿಂಗ್ ನನ್ನ ಜತೆಗೆ ನಿಂತಿದ್ದರು ಎಂದು ಹಳೆಯ ಘಟನೆಗಳನ್ನು ಮುಂಬೈನಲ್ಲಿ ನಡೆದ ಸಾಹಿತ್ಯದ ಸಮ್ಮೇಳನವೊಂದರಲ್ಲಿ ತೆರೆದಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.