‘ಪುನೀತ್‌’ ನೋಡಲು ರಜೆ ಕೊಡಿ.. ಬಾಗಲಕೋಟೆಯ ಪತ್ರ ವೈರಲ್

Published : Feb 06, 2019, 11:54 PM ISTUpdated : Feb 07, 2019, 12:00 AM IST
‘ಪುನೀತ್‌’ ನೋಡಲು ರಜೆ ಕೊಡಿ.. ಬಾಗಲಕೋಟೆಯ ಪತ್ರ ವೈರಲ್

ಸಾರಾಂಶ

ಪುನೀತ್ ಅಭಿನಯದ ಚಿತ್ರ ವೀಕ್ಷಣೆಗೆ ಇಲ್ಲೊಬ್ಬರು ರಜೆ ಕೇಳದ್ದಾರೆ. ಕುಟುಂಬ ಸಮೇತ ತೆರಳಬೇಕಿದ್ದು ಆನ್ ಲೈನ್ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಾಗಲಕೋಟೆ [ಫೆ.06]  ಪುನೀತ್ ರಾಜ್ ಕುಮಾರ್ ಅಭಿಮಯದ ನಹು ನಿರೀಕ್ಷಿತ ನಟಸಾವ೯ಭೌಮ ಚಿತ್ರ ವೀಕ್ಷಣೆಗಾಗಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ರಜೆ ಕೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಶೀಗಿಕೇರಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್  ಕುಟುಂಬ ಸಮೇತ ಚಿತ್ರ ನೋಡಲು ಅವಕಾಶ ಕೋರಿ ಪಿಡಿಓಗೆ ರಜೆ ಪತ್ರ ಬರೆದಿದ್ದಾರೆ ಅನಿಲ್ ಚವ್ಹಾಣ ಎಂಬುವರು ಸಿನಿಮಾ ವೀಕ್ಷಣೆಗೆ ರಜೆ ಕೇಳಿದ್ದಾರೆ. 

ನಟಸಾವ೯ಭೌಮ ಸಿನಿಮಾ ಕುಟುಂಬ ಸಮೇತ ಎಲ್ಲ ವಯಸ್ಸಿನವರು ನೋಡಬಹುದಾದ ಚಿತ್ರ. ಮೇಲಾಗಿ ಡಾ.ರಾಜ್ ಅವರ 3ನೇ ಪುತ್ರನ ಸಿನಿಮಾ ಇದಾಗಿದ್ದರಿಂದ ನೋಡಲು ರಜೆ ಕೊಡಿ ಎಂದು ಕೇಳಿದ್ದಾರೆ.

ಹೀಗಾಗಿ ಫೆ.7 ರಂದು ರಾಜ್ಯಾಂದ್ಯಂತ ಬಿಡುಗಡೆಯಾಗುವ ನಟಸಾವ೯ಭೌಮ ಚಿತ್ರ ವೀಕ್ಷಣೆಗೆ ಅವಕಾಶ ಕೋರಿ ಪತ್ರ ಬರೆದಿದ್ದಾರೆ. ಟಿಕೆಟ್ ಗಾಗಿ ಆನ್ ಲೈನ್ ಬುಕ್ಕಿಂಗ್ ಮಾಡಿದ್ದು, ಕುಟುಂಬ ಸಮೇತ ಚಿತ್ರ ನೋಡಲು ಅವಕಾಶ ಕೊಡಿ ಅಂತ ರಜೆಪತ್ರ ಬರೆದಿದ್ದಾರೆ. ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರಗದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!