‘ಗೌಡರ ಹುಡುಗನೇ ಬೇಕು’ ಮನದಾಳ ಬಿಚ್ಚಿಟ್ಟ ರಚಿತಾ ಮಾಡಿಕೊಂಡ ವಿನಂತಿ

Published : Feb 06, 2019, 06:40 PM ISTUpdated : Feb 06, 2019, 06:52 PM IST
‘ಗೌಡರ ಹುಡುಗನೇ ಬೇಕು’ ಮನದಾಳ ಬಿಚ್ಚಿಟ್ಟ ರಚಿತಾ ಮಾಡಿಕೊಂಡ ವಿನಂತಿ

ಸಾರಾಂಶ

ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ನಾವು ಗೌಡರು..ಹಾಗಾಗಿ ಗೌಡರ ಹುಡುಗನನ್ನೇ ಲೈಕ್ ಮಾಡ್ತೆನೆ ಎಂದು ಹೇಳಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತರೇವಾರಿ ಪ್ರತಿಕ್ರಿಯೆಗಳು ಎದುರಾಗಿದ್ದವು. ಈಗ ಸ್ವತಃ ರಚಿತಾ ರಾಮ್ ಅದಕ್ಕೆಲ್ಲ ಉತ್ತರ ನೀಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಶೋ ಒಂದು ರಚಿತಾ ಅವರ ಭಾವನೆ ವ್ಯಕ್ತಮಾಡಲು ವೇದಿಕೆಯಾಯಿತು. ಹಾಸ್ಯದ ದೃಷ್ಟಿಯಿಂದಲೇ ವೇದಿಕೆ ಮೇಲೆ ಬಂದ ಒಂದಷ್ಟು ಜನ ಹುಡುಗರು ನಾವೆಲ್ಲ ಗೌಡರು ಎಂದು ಪರಿಚಯ ಮಾಡಿಕೊಳ್ಳಲು ಆರಂಭಿಸಿದರು. ಇದಾದ ಮೇಲೆ ಮಾತನಾಡಿದ ರಚಿತಾ ಅನೇಕ ವಿಚಾರಗಳನ್ನು ಹೇಳಿದರು.

ಯಾವ ಸಂದರ್ಭದಲ್ಲಿ ಆ ರೀತಿ ಹೇಳಿದೆನೋ[ಗೌಡರ ಹುಡುಗ] ಗೊತ್ತಿಲ್ಲ. ಇರಲಾರದೆ .... ಬಿಟ್ಟುಕೊಂಡೆವು ಅನ್ನಂಗಾಗಿದೆ. ಎಲ್ಲ ಪ್ರೇಸ್ ಮೀಟ್‌ ನಲ್ಲಿಯೂ ಯಾವಾಗ ಮದುವೆ ಆಗ್ತೀರಾ? ರಿಲೇಶನ್ ಶಿಪ್ ನಲ್ಲಿ ಇದ್ದೀರಾ ನೀವು? ಎಂದೆಲ್ಲ ಪ್ರಶ್ನೆ ಕೇಳುತ್ತಾರೆ ಯಾಕೆ ಅನ್ನೋದೆ ಗೊತ್ತಿಲ್ಲ.
ಮದುವೆಯಾಗಲು ಗೌಡರ ಹುಡಗುಗನೇ ಬೇಕೆಂದ ರಚಿತಾ

ಕರಿಯರ್ ಬಗ್ಗೆ ಏನು ಮಾತನಾಡಿದ್ದರೂ ತೆಗೆದುಳ್ಳುತ್ತೇನೆ. ಆದರೆ ಪ್ರತಿಯೊಬ್ಬರಿಗೂ ಪರ್ಸನಲ್ ಲೈಫ್ ಇರುತ್ತದೆ. ಪರ್ಸನಲ್ ಲೈಫ್‌ ನಲ್ಲಿ ತಂದೆ ತಾಯಿ ಇರ್ತಾರೆ. ತಂದೆ ತಾಯಿ ಡಿಸಿಶನ್ ತಗೋತಾರೆ.

ನೀವು ಈ ಪಾತ್ರ ಮಾಡಬೇಡಿ ಎಂದು ಹೇಳಿ ಮಾಡಲ್ಲ.  ಆದರೆ ಪರ್ಸನಲ್ ಲೈಫ್ ಅನ್ನೋದು ಸೆಲೆಬ್ರಿಟಿಗಳಿಗೂ ಇರುತ್ತದೆ.  ದಯವಿಟ್ಟು ವಿನಂತಿ ಮಾಡಿಕೊಳ್ಳುತ್ತೇವೆ ನಮ್ಮ ಪರ್ಸನಲ್ ಲೈಫ್ ಬಿಟ್ಟು ಬಿಡಿ ಎಂದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!