Bharjari Bachelors Show: ಮಕ್ಕಳು ಬೇಡ ಅಂದ್ರೆ ಡಿವೋರ್ಸ್​ ಕೊಡ್ತೇನೆ! ಡ್ರೋನ್​ ಮಾತಿಗೆ ಗಗನಾ ಶಾಕ್​

Published : Jul 08, 2025, 12:06 PM ISTUpdated : Jul 08, 2025, 12:24 PM IST
Drone Pratap and  Gagana

ಸಾರಾಂಶ

ನನಗೆ ಮಕ್ಕಳೇ ಬೇಡ ಎಂದು ಹೆಂಡ್ತಿ ಹೇಳಿದ್ರೆ ಏನು ಮಾಡುತ್ತಿ ಎಂದು ಡ್ರೋನ್​ ಪ್ರತಾಪ್​ಗೆ ಕೇಳಿದಾಗ ಅವರು ಹೇಳಿದ್ದೇನು? ಇದಕ್ಕೆ ಗಗನಾ ಪ್ರತಿಕ್ರಿಯೆ ಏನು? 

ಮಹಾನಟಿಯ ಮೊದಲ ಸೀಸನ್​ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, ಸದ್ಯ ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಡ್ರೋನ್​​ ಪ್ರತಾಪ್​ಗೆ ಜೋಡಿಯಾಗಿದ್ದಾರೆ. ಇದಾಗಲೇ ಈ ಜೋಡಿ ಭಾರಿ ಮೋಡಿ ಮಾಡುತ್ತಲೇ ಇದೆ. ಈ ರಿಯಾಲಿಟಿ ಷೋನಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್​ನಲ್ಲಿ ತೊಡಗಿಸಿಕೊಂಡಿವೆ. ಪ್ರಪೋಸಲ್​ ರೌಂಡ್, ಆ ರೌಂಡ್​, ಈ ರೌಂಡ್​ ಎನ್ನುತ್ತಲೇ ರಿಯಲ್​ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಳ್ಳುತ್ತಿವೆ. ಇದಾಗಲೇ ಈ ಷೋನಲ್ಲಿ ಹಲವು ರೌಂಡ್​ ಆಗಿದ್ದು, ಪ್ರಪೋಸ್​, ರೊಮಾನ್ಸ್​, ಮದುವೆಯ ನಂತರ ಮಕ್ಕಳವರೆಗೂ ಬಂದು ನಿಂತಿದೆ!

ಇದೀಗ ವೀಕ್ಷಕರು ಜೋಡಿಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಮಯದಲ್ಲಿ ಮಹಿಳೆಯೊಬ್ಬರು, ಡ್ರೋನ್​ ಪ್ರತಾಪ್​ಗೆ ಒಂದು ವೇಳೆ ನಿಮ್ಮ ಮದುವೆಯಾಗುವ ಹುಡುಗಿ ಮಕ್ಕಳು ಬೇಡ ಅಂದ್ರೆ ಏನು ಮಾಡ್ತೀರಿ ಎಂದು ಕೇಳಿದ್ದಾರೆ. ನನಗೆ ಮಕ್ಕಳು ಬೇಕೇ ಬೇಕು. ಅದನ್ನು ಮುಂಚಿತವಾಗಿಯೇ ಮಾತನಾಡಿಕೊಳ್ತೇನೆ. ಮನಸ್ಸಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. ಆಗ ರವಿಚಂದ್ರನ್​ ಅವರು, ಅಲ್ಲಿ ಇದ್ದ ಪ್ರಶ್ನೆ ಮದುವೆಯಾದ ಮೇಲೆ ಮಗು ಬೇಡ ಎಂದರೆ ಏನು ಮಾಡುತ್ತೀ ಎನ್ನುವುದು, ಮದುವೆಗೆ ಮುನ್ನವೇ ಡಿಸಿಷನ್​ ತಗೊಂಡ್ವಿ ಎನ್ನುವ ಪ್ರಶ್ನೆಯೆಲ್ಲಾ ಬರುವುದಿಲ್ಲ. ಒಂದು ವೇಳೆ ಮದುವೆಯಾದ ಮೇಲೆ ಮಗುನೇ ಆಗದೇ ಇರುವ ಪರಿಸ್ಥಿತಿ ಇರಬಹುದು, ಮಗುನೇ ಬೇಡ ಎನ್ನುವ ಪರಿಸ್ಥಿತಿ ಇರಬಹುದು. ಆ ಸಮಯದಲ್ಲಿ ಏನು ಮಾಡುತ್ತಿ ಎಂದು ಕೇಳಿದ್ದಾರೆ. ಅದಕ್ಕೆ ಡ್ರೋನ್​ ಪ್ರತಾಪ್​, ಒಂದು ವೇಳೆ ಮಗು ಆಗುವ ಸ್ಥಿತಿ ಇದ್ದರೂ ಮಗು ಬೇಡ ಎಂದರೆ ಡಿವೋರ್ಸ್​ ಕೊಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಗಗನಾ ಅರೆಕ್ಷಣ ಶಾಕ್​ ಆಗಿದ್ದಾರೆ.

ಕುತೂಹಲದ ವಿಷ್ಯ ಎಂದರೆ ಡ್ರೋನ್​ ಪ್ರತಾಪ್​ ಮಾತಿಗೆ ನಟಿ ರಚಿತಾ ಕೂಡ ಸರಿ ಎನ್ನುವಂತೆ ತಲೆದೂಗಿದ್ದಾರೆ. ಕೊನೆಗೆ ಗಗನಾ ಅವರ ಬಳಿ ಆ್ಯಂಕರ್​ ನಿರಂಜನ್​ ಈ ಮಾತಿಗೆ ನೀವು ಒಪ್ಪುತ್ತೀರಾ ಕೇಳಿದಾಗ, ಡ್ರೋನ್​ ಪ್ರತಾಪ್​ ಹೇಳಿದ್ದು ಸರಿ ಇದೆ. ಒಂದು ವೇಳೆ ಮಗು ಆದ ಮೇಲೆ ಇಬ್ಬರೂ ಕೇರ್​ ಮಾಡಬೇಕಾಗುತ್ತದೆ. ಅಮ್ಮ ಮಗುವನ್ನು ಬೇಡ ಎಂದುಬಿಟ್ಟರೆ ಕಷ್ಟ ಆಗುತ್ತದೆ. ಅದಕ್ಕಾಗಿಯೇ ಇವರು ಹೇಳಿದ್ದು ಸರಿಯಿದೆ ಎಂದಿದ್ದಾರೆ. ಅದಕ್ಕೆ ನಿರಂಜನ್​ ತಮಾಷೆಗೆ ಹಾಗಿದ್ದರೆ ಇವ್ರು ಡಿವೋರ್ಸ್​ ಆಗೋದನ್ನೇ ನೀವು ಕಾಯ್ತಾ ಇದ್ದೀರಾ ಎಂದು ಗಗನಾಳ ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಈ ಷೋನಲ್ಲಿ ರೊಮಾನ್ಸ್​, ಮದುವೆ, ಮಕ್ಕಳು ಎಲ್ಲವೂ ಆಯ್ತು, ರಿಯಾಲಿಟಿ ಷೋ ಹೆಸರಿನಲ್ಲಿ ಇನ್ನು ಏನೇನು ನೋಡಬೇಕೋ ಎಂದು ಕಮೆಂಟ್​ ಮಾಡುತ್ತಲೇ ಹಲವರು ಈ ಷೋನ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ಸದ್ಯ ಡ್ರೋನ್​ ಪ್ರತಾಪ್​ ಮತ್ತು ಗಗನಾರ ಹವಾ ಹೆಚ್ಚಿದೆ. ಇಬ್ಬರೂ ಪ್ರೇಮಿಗಳಂತೆ ದಿನದಿಂದ ದಿನಕ್ಕೆ ವರ್ತಿಸುತ್ತಿದ್ದಾರೆ. ಗಗನಾಗಾಗಿ ಮಹಾತ್ಯಾಗಿಯಾದವರಂತೆ ಡ್ರೋನ್​ ಪ್ರತಾಪ್​ ವರ್ತಿಸುತ್ತಿದ್ದರೆ, ಆ ಪ್ರೀತಿಯನ್ನು ನೋಡಿ, ಜೀವನದಲ್ಲಿ ಪ್ರೀತಿಯನ್ನೇ ಕಾಣದವರಂತೆ ಗಗನಾ ಕಣ್ಣೀರು ಸುರಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ