
ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3' ಸಿನಿಮಾಕ್ಕಾಗಿ ಮಲಯಾಳಂ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಮೇ 21 ರಂದು ಈ ಸಿನಿಮಾ ಥಿಯೇಟರ್‌ಗಳಿಗೆ ಬರಲಿದೆ ಎಂದು ವರದಿಯಾಗಿದೆ. ಸದ್ಯ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿರೋ ಎಲ್ಲಾ ರೆಕಾರ್ಡ್‌ಗಳನ್ನು 'ದೃಶ್ಯಂ 3' ಮುರಿಯುತ್ತಾ ಅಂತಾನೂ ಜನ ಕಾಯ್ತಿದ್ದಾರೆ. ಮಲಯಾಳಂ ಅಷ್ಟೇ ಅಲ್ಲದೆ, ಹಿಂದಿ, ತಮಿಳು ಮತ್ತು ತೆಲುಗಿನಲ್ಲೂ ದೃಶ್ಯಂ ಸಿನಿಮಾ ರಿಮೇಕ್ ಆಗಿತ್ತು.
ಹಿಂದಿಯಲ್ಲಿ ಅಜಯ್ ದೇವಗನ್, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ತೆಲುಗಿನಲ್ಲಿ ವೆಂಕಟೇಶ್ ಅವರು ಜಾರ್ಜ್‌ಕುಟ್ಟಿ ಪಾತ್ರಕ್ಕೆ ಜೀವ ತುಂಬಿದ್ದರು. ಈಗ, ದೃಶ್ಯಂ ಮೊದಲ ಭಾಗದ ಪೊಲೀಸ್ ಸ್ಟೇಷನ್ ದೃಶ್ಯದ ಬಗ್ಗೆ ನಟಿ ಎಸ್ತರ್ ಅನಿಲ್ ಹೇಳಿದ ಒಂದು ಮಾತು ಸಖತ್ ಚರ್ಚೆಯಲ್ಲಿದೆ. ತೆಲುಗಿನಲ್ಲಿ ಇದೇ ದೃಶ್ಯವನ್ನು ಶೂಟ್ ಮಾಡುವಾಗ, ಮೋಹನ್‌ಲಾಲ್ ಅವರ ರೀತಿ ನಟಿಸಲು ವೆಂಕಟೇಶ್ ಅವರಿಂದ ಸಾಧ್ಯವಾಗಿರಲಿಲ್ಲ ಎಂದು ಎಸ್ತರ್ ಹೇಳಿದ್ದಾರೆ.
"ಇಂಟ್ರಾಗೇಷನ್ ವೇಳೆ ಸಹದೇವನ್ ಬಂದು ಒದೆಯುವ ಒಂದು ಸೀನ್ ಇದೆ. ಆಗ ಅವರ ಹೆಂಡತಿ, ಮಕ್ಕಳು ಪಕ್ಕದಲ್ಲೇ ನೋವಿನಿಂದ ನಿಂತಿರುತ್ತಾರೆ. ಒದ್ದು ಆದ್ಮೇಲೆ ಜಾರ್ಜ್‌ಕುಟ್ಟಿ, ತನ್ನ ಕುಟುಂಬವನ್ನು ನೋಡಿ ಒಂದು ನಗು ಬೀರುತ್ತಾರೆ. ಏನೂ ಆಗಿಲ್ಲ, ಎಲ್ಲ ಸರಿ ಇದೆ ಅನ್ನೋ ಹಾಗೆ. ಅದು ಹೃದಯ ವಿದ್ರಾವಕ ದೃಶ್ಯವಾಗಿತ್ತು. ಆ ಒಂದೇ ಶಾಟ್‌ನಲ್ಲಿ ಅವರು ಹೆಚ್ಚೇನೂ ಮಾಡಲ್ಲ. ಈ ದೃಶ್ಯ ನನಗೆ ಯಾಕೆ ನೆನಪಿದೆ ಅಂದ್ರೆ, ಇದೇ ಸೀನ್ ಅನ್ನು ನಾವು ತೆಲುಗಿನಲ್ಲಿ ರಿಮೇಕ್ ಮಾಡಿದ್ವಿ.
ಶ್ರೀಪ್ರಿಯಾ ಅವರು ನಿರ್ದೇಶನ ಮಾಡುತ್ತಿದ್ದರು. ವೆಂಕಿ ಸರ್‌ಗೆ, ಹೀಗೆ ಶಾಟ್ ಇದೆ, ಅವರು ಬಂದು ಒದೀತಾರೆ, ಆಗ ನೀವು ಹೀಗೆ ತಿರುಗಿ ನಗಬೇಕು ಅಂದ್ರು. ಆಗ ವೆಂಕಿ ಅಂಕಲ್, 'ಅಮ್ಮಾ ಅದು ಪಣ್ಣ ಮುಡಿಯಾದು, ಅದು ಮೋಹನ್‌ಲಾಲ್‌ಗೆ ಮಾತ್ರ ಮಾಡಲು ಸಾಧ್ಯ' ಅಂತ ಹೇಳಿದ್ರು' ಎಂದು ಎಸ್ತರ್ ವಿವರಿಸಿದ್ದಾರೆ.
ಇನ್ನು, 'ದೃಶ್ಯಂ 3' ಸಿನಿಮಾ ಮೇ 21 ರಂದು ಥಿಯೇಟರ್‌ಗೆ ಬರಲಿದೆ. ಚಿತ್ರದ ಟೀಸರ್ ಇಂದು ಸಂಜೆ ಬಿಡುಗಡೆಯಾಗಲಿದೆ. ಮೋಹನ್‌ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಕ್, ಕಲಾಭವನ್ ಶಾಜೋನ್, ಇರ್ಷಾದ್, ಗಣೇಶ್ ಕುಮಾರ್ ಅವರಂತಹ ತಾರೆಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟನಿ ಪೆರುಂಬಾವೂರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಿಂದಿ ಅವತರಣಿಕೆಯು 2026ರ ಅಕ್ಟೋಬರ್ 2 ರಂದು ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.