ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ

By Web DeskFirst Published Sep 14, 2018, 5:56 PM IST
Highlights

ಸಾಹಸ ಸಿಂಹ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಮೂರು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಹಾಗಾದರೆ  ಏನಿದರ ವಿವರ ಇಲ್ಲಿದೆ...

ಬೆಂಗಳೂರು[ಸೆ.14]  ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ 2018ಕ್ಕೆ ವೇದಿಕೆ ಸಿದ್ಧವಾಗಿದೆ. ಸೆ. 16,17 ಮತ್ತು 18 ರಂದು ವಿವಿ ಪುರದ ಕುವೆಂಪು ಕಲಾಕ್ಷೇತ್ರದಲ್ಲಿ ಸಾಹಸ ಸಿಂಹನ ಸ್ಮರಣೆ ನಡೆಯಲಿದೆ. ಕೋರಮಂಗಲದ ಡಾ. ವಿಷ್ಣು ಸೇನಾ ಸಮಿತಿ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದೆ.

ಸೆ. 16 ರಂದು ಬೆಳಗ್ಗೆ 8 ಗಂಟೆಗೆ ಮೆರವಣಿಗೆ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 10.30 ಕ್ಕೆ ಉದ್ಘಾಟನೆ ನೆರವೇರಲಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ನಟ ಕಿಚ್ಚ ಸುದೀಪ್, ಶಾಸಕ ಉದಯ್ ಗರುಡಾಚಾರ್, ಸಾಹಿತಿ, ಕವಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಸಾಹಿತಿ ವಿಜಯಮ್ಮ, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪತ್ರಕರ್ತ ಸದಾಶಿವ್ ಶೆಣೈ, ಕೆ.ಜಿ.ಕುಮಾರ್, ನಿರ್ದೇಶಕ ರವಿ ಶ್ರೀವತ್ಸ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಆಶಯ ನುಡಿಗಳ ಮೂಲಕ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಲಿದ್ದಾರೆ.

ಸೆ.16 ರಂದು ಮಧ್ಯಾಹ್ನ 2.30ಕ್ಕೆ ‘ಬಂಧು-ಬಳಗ’ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಹಿರಿಯ ಕಲಾವಿದ ಎಸ್‌.ಶಿವರಾಮ್  ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕಲಾವಿದರಾದ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಜೈಜಗದೀಶ್, ಶೋಭರಾಜ್, ಸುಂದರ್‌ ರಾಜ್, ಚಿ.ಗುರುದತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಅವಿನಾಶ್, ಶಂಕರ್ ಅಶ್ವಥ್ ಪಾಲ್ಗೊಳ್ಳಲಿದ್ದಾರೆ.

ವಿನಯಾ ಪ್ರಕಾಶ್‌ಗೆ ’ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿ

ಸೆ. 16ರಂದು ಸಂಜೆ 6 ಗಂಟೆಗೆ ಪ್ರೇಮಮಾರುತ ಹೆಸರಿನಲ್ಲಿ ಡಾ. ವಿಷ್ಣು ಅವರ ಗೀತೆಗಳ ಗಾಯನ ನಡೆಯಲಿದೆ.  ಶಾಸಕ ಎಚ್‌.ಎಂ.ರೇವಣ್ಣ, ಗೋಪಾಲಯ್ಯ, ನಿರ್ಮಾಪಕ ಸೂರಪ್ಪ ಬಾಬು, ಕೆ.ಮಂಜು ಪಾಲ್ಗೊಳ್ಳಲಿದ್ದಾರೆ.

ಎರಡನೇ ದಿನ ಅಂದರೆ ಸೆಪ್ಟೆಂಬರ್ 17 ರಂದು ನಾಡು, ನುಡಿ ಮತ್ತು ಡಾ.ವಿಷ್ಣುವರ್ಧನ ಹೆಸರಿಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ‘ರವಿರ್ಮನಾ ಕುಂಚದಾ[ಚಿತ್ರಗಳಲ್ಲಿ ಅರಳಿದ ವಿಷ್ಣುವರ್ಧನ]’ ಕಾರ್ಯಕ್ರಮ ನಡೆಯಲಿದ್ದು ಬಿ.ಎಲ್.ಶಂಕರ್, ಚಿತ್ರಾವಧಾನಿ ಬಿ.ಕೆ.ಎಸ್ ವರ್ಮಾ ಪಾಲ್ಗೊಳ್ಳಲಿದ್ದಾರೆ. 11.30ಕ್ಕೆ ಕಿರು ಚಿತ್ರೋತ್ಸವ ಆಯೋಜಿಸಲಾಗಿದ್ದು ಡಾ. ವಿ.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2.30ಕ್ಕೆ ನಿರ್ದೇಶಕರು ಕಂಡಂತೆ ವಿಷ್ಣುವರ್ಧನ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು ಎಸ್.ನಾರಾಯಣ್, ಹಿರಿಯ ನಿರ್ದೇಶಕ ಭಾರ್ಗವ, ವಾಸು, ಓಂ ಸಾಯಿಪ್ರಕಾಶ್, ದೊರೈ ಭಗವಾನ್, ದಿನೇಶ್ ಬಾಬು, ಫಣಿ ರಾಮಚಂದ್ರ ಭಾಗವಹಿಸಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಸಂಜೆ 4.30ಕ್ಕೆ ಡಾ. ವಿಷ್ಣು ಸೇನಾ ಸಮಿತಿ ಬಹಿರಂಗ ಸಭೆ ನಡೆಯಲಿದೆ. ಸೆ. 17 ರಂದು ಸಂಜೆ 5ಕ್ಕೆ ಕನ್ನಡವೇ ನಮ್ಮಮ್ಮ ಹೆಸರಿನಲ್ಲಿ ನಾಡು ನುಡಿಗೆ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್, ಶ್ರೀರಾಮಲು, ಡಾ.ಮನು ಬಳಿಗಾರ್, ಪದ್ಮಾ ಶೇಖರ್, ವಸುಂಧರಾ ಭೂಪತಿ ಪಾಲ್ಗೊಳ್ಳಲಿದ್ದಾರೆ.

ವಿಷ್ಣು ಸ್ಮಾರಕ: ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್ ಕೊನೆ ಎಚ್ಚರಿಕೆ

ಸಂಜೆ 6.30ಕ್ಕೆ ‘ಏಳೇಳು ಜನುಮದಲ್ಲೂ ಕನ್ನಡ ಕುಲವಾಗಿರುವೆ’ ಕಾರ್ಯಕ್ರಮ ನಡೆಯಲಿದ್ದು ನಡಿ ಶ್ರುತಿ, ಗಾಯಕಿ ಸುಮಿತ್ರ, ಗಿರಿಜಾ ಲೋಕೇಶ್, ಪ್ರಮಿಳಾ ಜೋಶಾಯ್, ಪ್ರೇಮಾ ವಿಷ್ಣುವರ್ಧನ್ ಜತೆಗಿನ ತಮ್ಮ ಸಿನಿಮಾ ಅನುಭವ ಹಂಚಿಕೊಳ್ಳಲಿದ್ದಾರೆ.

ಸೆ.18 ರಂದು ಸಾಹಸ ಸಿಂಹರ ಜನ್ಮದಿನ ನಿಮಿತ್ತ ಬೆಳಗ್ಗೆ 10.30ಕ್ಕೆ ಡಾ.ವಿಷ್ಣು ಜಯಂತಿ  ಆಚರಿಸಲಾಗುವುದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಮಾಲಾರ್ಪಣೆ ಮಾಡಲಾಗುವುದು. 11.30ಕ್ಕೆ ಅಭಿಮಾನ್ ಸ್ಟುಡಿಯೋದ ವಿಷ್ಣು ಪುಣ್ಯಭೂಮಿಗೆ ಪೂಜೆ ಮಾಡಲಾಗುವುದು. ಮಧ್ಯಾಹ್ನ 4.30ಕ್ಕೆ ಹಖೆ ಬೇರು-ಹೊಸ ಚಿಗುರು ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ನಡೆಯಲಿದ್ದು ಶಶಿಕುಮಾರ್, ಸಿಹಿಕಹಿ ಚಂದ್ರು, ಚಿರು ಸರ್ಜಾ, ಚರಣ್ ರಾಜ್, ದುನಿಯಾ ವಿಜಯ್, ಚೇತನ್ , ಪ್ರೇಮ್ ಸೇರಿದಂತೆ ಅನೇಕ ನಾಯಕ ನಟರು ಪಾಲ್ಗೊಳ್ಳಲಿದ್ದಾರೆ.

ನಟಿ ವಿನಯಪ್ರಕಾಶ್ ಅವರಿಗೆ ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಚಿವೆ ಜಯಮಾಲಾ, ಕೃಷ್ಣ ಭೈರೇಗೌಡ, ಶಾಸಕ ಸುರೇಶ್ ಕುಮಾರ್, ಬಿ.ಸಿ.ಪಾಟೀಲ್ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ‘ದೊಡ್ಮನುಷ್ಯನ ಗುಣಗಾನ’ ನಡೆಯಲಿದ್ದು ಡಾ.ವಿಷ್ಣು ಅಭಿಮಾನದ ಗೀತೆಗಳ ಗಾಯನದೊಂದಿಗೆ ಕಾರ್ಯಕ್ರಮ ಸಮಾರೋಪವಾಗಲಿದೆ.

ಮಾರ್ಗ ಸೂಚಿ ಇಲ್ಲಿದೆ

 

 

click me!