
ಮುಂಬೈ : ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಸೋಫಿಯಾ ಹಯಾತ್ ಇದೀಗ ಗಣೇಶನ ಭಕ್ತೆಯಾಗಿ ಬದಲಾಗಿದ್ದಾರೆ. ಅಲ್ಲದೇ ಲಾರ್ಡ್ ಗಣೇಶ ನನ್ನ ಮಗ ಎಂದು ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದು ಹಾಕಿಕೊಂಡಿದ್ದು ಇದೀಗ ಸಾಕಷ್ಟು ವೈರಲ್ ಆಗಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಸೋಫಿಯಾ ನಾನು ಗಣೇಶನ ತಾಯಿ, ಐ ಲವ್ ಗಣೇಶ, ಗಣೇಶನೇ ಅಲ್ಲಾಹ್, ಐ ಲವ್ ಮೈ ಸನ್ ಅಲ್ಲಾಹ್, ಗಣಪತಿ ಬಪ್ಪ ಮೋರ್ಯ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಶಿವನ ಬಗ್ಗೆಯೂ ಕೂಡ ಸೋಫಿಯಾ ಇಂತಹ ಅನೇಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ತಾನು ಶಿವನಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದರು.
ಇಷ್ಟೇ ಅಲ್ಲದೇ ಪದೇ ಪದೇ ಇಂತಹ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. ಈ ಹಿಂದೆ ಕ್ರಿಕೆಟಿಗ ರೋಹಿತ್ ಶರ್ಮಾಗೆ ತಾವು ನಗ್ನ ಚಿತ್ರ ಸಮರ್ಪಿಸುವುದಾಗಿ ಹೇಳಿ ಹಾಗೆಯೇ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.