ಡಾ ರಾಜ್‌ಕುಮಾರ್ ಸಹೋದರಿ ನಾಗಮ್ಮ ನಿಧನ; ಕೊನೇ ಕ್ಷಣದವರೆಗೂ ಅಪ್ಪು ಸಾವಿನ ಸುದ್ದಿ ತಿಳಿದಿರಲಿಲ್ಲ!

Published : Aug 01, 2025, 12:38 PM IST
Dr Rajkumar Nagamma

ಸಾರಾಂಶ

ಡಾ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರದಲ್ಲಿ ವಾಸವಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಡಾ ರಾಜ್‌ಕುಮಾರ್ (Dr Rajkumar) ಸಹೋದರಿ ನಾಗಮ್ಮ (Nagamma) ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರದಲ್ಲಿ ವಾಸವಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ವಯೋಸಹಜವಾಗಿ ಸಾಕಷ್ಟು ಏರುಪೇರಾಗಿತ್ತು.

ಅಣ್ಣಾವ್ರ ಸಹೋದರಿ ನಾಗಮ್ಮ ಅವರಿಗೆ ಮೊಮ್ಮಗ ಪುನೀತ್ ರಾಜ್‌ಕುಮಾರ್ (ಅಪ್ಪು) ನಿಧನರಾಗಿದ್ದು ಗೊತ್ತೇ ಇಲ್ಲ. ಅವರಿಗೆ ಖಂಡಿತ ಆ ಸುದ್ದಿ ಆಘಾತ ತರುತ್ತಿದೆ ಎಂಬ ಕಾರಣಕ್ಕೆ ಅವರಿಗೆ ಹೇಳಿರಲೇ ಇಲ್ಲ. ಸಾಯುವ ಕ್ಷಣದವರೆಗೂ ಅವರಿಗೆ ಪುನೀತ್(Puneeth Rajkumar) ಅವರು ಈ ಲೋಕದಲ್ಲಿ ಇಲ್ಲ ಅಂಬ ಸುದ್ದಿಯೇ ಗೊತ್ತಿಲ್ಲ. ಇದೀಗ ತಮ್ಮ ಮೊಮ್ಮಗನ ಬಳಿ ನಾಗಮ್ಮ ಅವರು ಸೇರಿಕೊಂಡಿದ್ದಾರೆ ಎನ್ನಬಹುದು.

ಡಾ ರಾಜ್‌ಕುಮಾರ್ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆ ಎಂಬುದು ಹಲವರಿಗೆ ಗೊತ್ತಿದೆ. ಅಲ್ಲಿಯೇ ಡಾ ರಾಜ್‌ಕುಮಾರ್ ಹೋಗಿದ್ದಾಗ ಕಾಡುಗಳ್ಳ ವೀರಪ್ಪನ್ (30 ಜುಲೈ 2000) ಭೀಮನ ಅಮಾವಾಸ್ಯೆ ದಿನ ಅಪಹರಣ ಮಾಡಿದ್ದರು. 108 ದಿನಗಳ ಬಳಿಕ ಆತ ತನ್ನ ಬೇಡಿಕೆ ಇಡೇರಿಸಿಕೊಂಡು ಡಾ ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದ. ಬಳಿಕ ಡಾ ರಾಜ್‌ಕುಮಾರ್ ಅವರು 12 ಏಪ್ರಿಲ್ 2006ರಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಒಟ್ಟಿನಲ್ಲಿ, ಇದೀಗ ಡಾ ರಾಜ್‌ಕುಮಾರ್ (Shivarajkumar) ಅವರ ಸಹೋದರಿ ನಾಗಮ್ಮ ಅವರು ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣ ದಂಪತಿಗಳು ಅವರನ್ನು ಚಾಮರಾಜನಗರಕ್ಕೆ ಹೋಗಿ ಭೇಟಿಯಾಗಿ ಬಂದಿದ್ದರು. ಇದೀಗ ನಾಗಮ್ಮ ಅವರು ನಿಧನರಾಗಿದ್ದು, ಅಣ್ಣಾವ್ರ ಕುಟುಂಬದಲ್ಲಿ ಹಿರೀಜೀವವನ್ನು ಕಳೆದುಕೊಂಡ ಸಹಜ ದುಃಖ ಮನೆಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?