
ಬೆಂಗಳೂರು(ಸೆ. 15): ಪವರ್ ಸ್ಟಾರ್ ಪುನೀತ್ ಮತ್ತು ರಾಧಿಕಾ ಪಂಡಿತ್ ಅಭಿನಯದ "ದೊಡ್ಮನೆ ಹುಡ್ಗ" ಚಿತ್ರಕ್ಕೆ ಇಂದು ಸೆನ್ಸಾರ್ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಆದರೆ, ಚಿತ್ರದ ಬಿಡುಗಡೆ ದಿನ ಒಂದು ವಾರ ಮುಂದಕ್ಕೆ ಹೋಗಿದೆ. ಸೂರಿ ನಿರ್ದೇಶನದ ಈ ಚಿತ್ರ ಸೆ. 23ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಸೆ.30ಕ್ಕೆ ರಿಲೀಸ್ ಆಗುತ್ತದೆ ಎಂದು ನಿರ್ದೇಶಕ ಸೂರಿ ಸ್ವತಃ ಸ್ಪಷ್ಟಪಡಿಸಿದ್ದಾರೆ.
ಪುನೀತ್, ರಾಧಿಕಾ ಪಂಡಿತ್ ಅಲ್ಲದೇ ರೆಬಲ್ ಸ್ಟಾರ್ ಅಂಬರೀಶ್ ಕೂಡ ಅಭಿನಯಿಸಿರುವ "ದೊಡ್ಮನೆ ಹುಡ್ಗ" ಈ ವರ್ಷದ ಮೋಸ್ಟ್ ಎಕ್ಸ್'ಪೆಕ್ಟೆಡ್ ಸಿನಿಮಾಗಳಲ್ಲೊಂದೆನಿಸಿದೆ. 'ಜಾಕಿ' ನಂತರ ಪುನೀತ್ ಮತ್ತು ಸೂರಿ ಕಾಂಬಿನೇಷನ್ ಈ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಯಾವುದೇ ದೊಡ್ಡ ಹಿಟ್ ಚಿತ್ರವಿಲ್ಲದೇ ನಿರಾಶೆಗೊಂಡಿರುವ ಪುನೀತ್ ರಾಜಕುಮಾರ್ ದೊಡ್ಮನೆ ಹುಡುಗನಾಗಿ ಯಶಸ್ಸು ಕಾಣುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಮುಂದೂಡಿದ್ದು ಯಾಕೆ?
ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸಿನಿಮಾ ಪ್ರದರ್ಶನಕ್ಕೆ ಅಡಚಣೆಯಾಗಿದೆ. ಈ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳ ಗಳಿಕೆ ತೀರಾ ಕಡಿಮೆ ಇದೆ. ಇಂಥ ವೇಳೆಯಲ್ಲಿ ಬಿಗ್ ಬಜೆಟ್ ದೊಡ್ಮನೆ ಹುಡುಗನ ಬಿಡುಗಡೆಯಾದರೆ ಇನ್ನಷ್ಟು ಕ್ಲಿಷ್ಟ ಸ್ಥಿತಿ ಏರ್ಪಡುತ್ತದೆ. ಈ ಸಿನಿಮಾಗಳು ಇನ್ನೊಂದು ವಾರವಾದರೂ ಓಡಲಿ ಎಂಬ ಉದ್ದೇಶದಿಂದ ಹೊಸ ಸಿನಿಮಾಗಳ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಮಾತು ಗಾಂಧಿನಗರದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.