
ಬೆಂಗಳೂರು (ಮಾ. 05): 80 ರ ದಶಕದಲ್ಲಿ ಬಟ್ಟಲು ಕಂಗಳ ಚೆಲುವೆ ಮಾಧವಿ ಆ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಅವರ ಕಂಗಳ ಕಾಂತಿಗೆ ಮಾರುಹೋಗದವರೇ ಇಲ್ಲ.
ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿದ ಪ್ರತಿಭಾನ್ವಿತ ನಟಿ. ಇವರು ಹೈದರಾಬಾದ್ ಮೂಲದವರು. ಖ್ಯಾತ ನಿರ್ದೇಶಕ ದಾಸರಿ ನಾರಾಯಣ್ ರಾವ್ ಇವರಿಗೆ ಮೊದಲ ಬಾರಿ ಅವಕಾಶ ನೀಡಿದ್ದು. 13 ನೇ ವಯಸ್ಸಿನಲ್ಲಿ ಇವರು ಬಣ್ಣ ಹಚ್ಚಿದ್ದು. ಅದಾದ ನಂತರ ಸಿನಿಮ ರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ರಾಜ್’ಕುಮಾರ್, ವಿಷ್ಣುವರ್ಧನ್ ಜೊತೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಕೆಲ ವರ್ಷಗಳ ನಂತರ ತೆರೆಮರೆಯಾದರು. ಈಗೇನು ಮಾಡ್ತಾ ಇದಾರೆ ಅನ್ನೋ ಕುತೂಹಲ ನಿಮಗಿದೆಯಾ? ಇಲ್ಲಿದೆ ನೋಡಿ.
ಮಾಧವಿ ಪ್ರಸ್ತುತ ನ್ಯೂ ಜೆರ್ಸಿಯಲ್ಲಿ ಪತಿ, ಮೂವರು ಮಕ್ಕಳ ಜೊತೆ ಕುಟುಂಬದ ಜೊತೆ ಸೆಟಲ್ ಆಗಿದ್ದಾರೆ. ಮತ್ತೊಮ್ಮೆ ಬಣ್ಣ ಹಚ್ಚುತ್ತೀರಾ ಎಂಬ ಪ್ರಶ್ನೆಗೆ ಸುತರಾಂ ಇಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.