
ಬೆಂಗಳೂರು (ಮಾ. 05): ಚಿತ್ರರಂಗ ಹರಿಯುವ ನದಿ ಇದ್ದಂತೆ. ಒಂದು ತಲೆ ಮಾರು ಹಿನ್ನೆಲೆಗೆ ಸರಿಯುತ್ತಿದ್ದಂತೆ ಇನ್ನೊಂದು ತಲೆ ಮಾರು ಬಂದು ಚಿತ್ರರಂಗವನ್ನು ಆಳುತ್ತದೆ. ಇದಕ್ಕೆ ಬಾಲಿವುಡ್ ಕೂಡ ಹೊರತಲ್ಲ.
ಇಲ್ಲಿ ಬದಲಾವಣೆ ಸಂಭವಿಸುವ ವೇಗ ಹೆಚ್ಚಾಗಿಯೇ ಇರುತ್ತದೆ. ಒಂದಷ್ಟು ಮಂದಿ ತೆರೆಗೆ ಸರಿಯುತ್ತಿದ್ದಂತೆ ಇನ್ನೊಂದು ತಲೆಮಾರು ತೆರೆಗೆ ಪ್ರವೇಶ ಪಡೆದುಕೊಳ್ಳುತ್ತದೆ. ಈಗ ಹೇಳಲು ಹೊರಟಿರುವ ವಿಚಾರವೂ ಅದೇ. ನಟ ಚೌಂಕಿ ಪಾಂಡೆ
ಮಗಳು ಅನನ್ಯಾ ಪಾಂಡೆ ಚಿತ್ರರಂಗಕ್ಕೆ ಬಂದಿರುವುದು ಹೆಚ್ಚಿನವರಿಗೆ ಗೊತ್ತಿದೆ. ಆಕೆ ಟೈಗರ್ ಶ್ರಫ್ ಜೊತೆಗೆ ನಟಿಸುತ್ತಿದ್ದಾಳೆ ಎನ್ನುವುದೂ ಹಳೆಯ ಸುದ್ದಿಯೇ. ಆದರೆ ಈಗಿನ ಹಾಟ್ ಏನಪ್ಪಾ ಅಂದರೆ ಆಕೆ ಫಿಟ್ ಅಂಡ್ ಫೈನ್ ಆಗಲು ಮೊದಲಿನಿಂದಲೂ ಜಿಮ್ ಮಾಡುತ್ತಾ ಬಂದಿರುವುದು.
‘ನಾನು ಫಿಟ್ ಅಂಡ್ ಫೈನ್ ಆಗಬೇಕು. ಅದಕ್ಕಾಗಿ ಯಾವುದೇ ಡಯಟ್ ಮೊರೆ ಹೋಗದೇ ನಿತ್ಯವೂ ಜಿಮ್'ನಲ್ಲಿ ವರ್ಕೌಟ್ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ಅನನ್ಯಾ. ಇದೆಲ್ಲಾ ಕಾಮನ್. ನಟ, ನಟಿಯರು ಜಿಮ್ ಮಾಡುವುದರಲ್ಲಿ ಯಾವುದೇ ಹೊಸ ಸಮಾಚಾರ ಇಲ್ಲ. ಆದರೆ ಅನನ್ಯ ಜಿಮ್ ಮುಗಿಸಿ ಹೊರಗೆ ಬರುತ್ತಿರುವ ಫೋಟೋ ಈಗ ವೈರಲ್ ಆಗಿದೆ. ಹೊಸ ಹುಡುಗಿಯ ಗೆಟಪ್ ಹೆಚ್ಚಿನವರಿಗೆ ಇಷ್ಟವಾಗಿದೆ. ಇದನ್ನು ನೋಡುತ್ತಿದ್ದಂತೆಯೇ ಅನನ್ಯಗೆ ಹೊಸ ಆಫರ್'ಗಳೂ ಬಂದಿವೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.