
ಕತ್ರಿನಾ ಕೈಫ್ ಎಲ್ಲಿ ಮಾಯವಾದರು ಎಂದು ಅಭಿಮಾನಿಗಳು ಹುಡುಕಾಟ ಶುರು ಮಾಡಬೇಕು ಎನ್ನುವ ಹೊತ್ತಿಗೆ ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ವಿಮಾನದ ಬಾಗಿಲಲ್ಲಿ ನಿಂತು ಅಮೆರಿಕಾಕ್ಕೆ ಹಾರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಓಹ್ ಕತ್ರಿನಾ ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂದುಕೊಂಡು ಸಮಾಧಾನ ಮಾಡಿಕೊಳ್ಳುವ ಹೊತ್ತಿಗೆ ಕತ್ರಿನಾ ಇನ್‌ಸ್ಟಾಗ್ರಾಂ ಅಕೌಂಟ್’ನಲ್ಲಿ ಬ್ಲಾಕ್ ಆ್ಯಂಡ್ ವೈಟ್ ಫೋಟೋಗಳ ಅಬ್ಬರ ಜೋರಾಯಿತು.
ಮಾದಕ ನೋಟ, ಬಿಚ್ಚಿದ ತಲೆ ಕೂದಲು, ನೃತ್ಯದ ಭಂಗಿ, ಹಿನ್ನೆಲೆಯಲ್ಲೊಂದಷ್ಟು ಹೋಗೆ ಇದೆಲ್ಲವೂ ಸೇರಿ ಕತ್ರಿನಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಲೈಕು, ಕಾಮೆಂಟ್‌ಗಳನ್ನ ಪಡೆದುಕೊಂಡುಬಿಟ್ಟರು ಕ್ಷಣಾರ್ಧದಲ್ಲಿ. ಕತ್ರಿನಾ ಅಮೆರಿಕಾಕ್ಕೆ ಹೋಗಿ ಫುಲ್ ಎಂಜಾಯ್ ಮೂಡ್‌ನಲ್ಲಿ ಇದ್ದಾರೆ ಎಂದುಕೊಂಡರೆ ಅದು ಸುಳ್ಳು,
ಅದಕ್ಕೆ ಬದಲಾಗಿ ಕತ್ರಿನಾ ಇಷ್ಟೆಲ್ಲಾ ಸಾಹಸ ಮಾಡುತ್ತಿರುವುದು ತಮ್ಮ ಮುಂದಿನ ಚಿತ್ರದ ತಯಾರಿಗಾಗಿ. ಅದೇನೇ ಆದರೂ ಈಗ ಕತ್ರಿನಾ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲೂ ಕಲರ್‌ಫುಲ್ ಆಗಿ ಹುಚ್ಚು ಅಭಿಮಾನಿಗಳ ಪಾಲಿಗೆ ಭಿನ್ನ ರೀತಿಯಲ್ಲಿ ದರುಶನ ದಯಪಾಲಿಸಿರುವುದು ಸುಳ್ಳಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.