ಧ್ರುವ ಸರ್ಜಾ ಏನ್ಮಾಡ್ತಾ ಇದ್ದಾರೆ? ’ಪೊಗರು’ ಯಾವಾಗ ರಿಲೀಸ್ ಆಗುತ್ತೆ?

First Published Jul 5, 2018, 3:13 PM IST
Highlights

ದೊಡ್ಡ ಮಟ್ಟದಲ್ಲಿ ಸುದ್ದಿಯಾದ ‘ಪೊಗರು’ ಏನಾಗಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ನಂದಕಿಶೋರ್ ನಿರ್ದೇಶನದ ಈ ಚಿತ್ರದ ಬಗ್ಗೆ ಯಾವಾಗಲೂ ಕೇಳಿಬರುವ ಮಾತು, ‘ಒಂದು ಹಂತದ ಶೂಟಿಂಗ್ ಮುಗಿದಿದೆ, ಧ್ರುವ ಅವರು ತೂಕ ಏರಿಸಿಕೊಳ್ಳುತ್ತಿದ್ದಾರೆ’ ಎಂಬುದು. ನಿಜಕ್ಕೂ ಅರ್ಜುನ್ ಸರ್ಜಾ ಏನ್ಮಾಡ್ತಾ ಇದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ. 

ಬೆಂಗಳೂರು (ಜೂ. 05): ಧ್ರುವ ಸರ್ಜಾ ಅಂಗಳದಲ್ಲಿ ಏನಾಗುತ್ತಿದೆ? ‘ಅದ್ದೂರಿ’, ‘ಬಹದ್ದೂರ್’ ಹಾಗೂ ‘ಭರ್ಜರಿ’ ಹೀಗೆ ಸರದಿ ಯಶಸ್ಸಿನ ನಂತರ ಧ್ರುವ ಸರ್ಜಾ ನಟನೆಯ ಮತ್ತೊಂದು ಭರ್ಜರಿ ಸಿನಿಮಾ ಸೆಟ್ಟೇರಿ ಅದು ಚಿತ್ರೀಕರಣ ಮುಗಿಸಿಕೊಂಡು ಇನ್ನೇನು ಬಿಡುಗಡೆಯ ಹಂತಕ್ಕೆ ಬರುತ್ತದೆಂದು ನಿರೀಕ್ಷೆ ಮಾಡಿ ಬರೋಬ್ಬರಿ ಎರಡ್ಮೂರು ತಿಂಗಳುಗಳಾಗುತ್ತಿವೆ.  ಆದರೂ ಯಾವುದೇ ಫಲಿತಾಂಶ ಕಾಣುತ್ತಿಲ್ಲ.

ದೊಡ್ಡ ಮಟ್ಟದಲ್ಲಿ ಸುದ್ದಿಯಾದ ‘ಪೊಗರು’ ಏನಾಗಿದೆ ಎಂಬ ಬಗ್ಗೆಯೂ ಮಾಹಿತಿ  ಇಲ್ಲ. ನಂದಕಿಶೋರ್ ನಿರ್ದೇಶನದ ಈ ಚಿತ್ರದ ಬಗ್ಗೆ ಯಾವಾಗಲೂ ಕೇಳಿಬರುವ ಮಾತು, ‘ಒಂದು ಹಂತದ ಶೂಟಿಂಗ್ ಮುಗಿದಿದೆ, ಧ್ರುವ ಅವರು ತೂಕ ಏರಿಸಿಕೊಳ್ಳುತ್ತಿದ್ದಾರೆ’ ಎಂಬುದು. ಇದಿಷ್ಟು ‘ಪೊಗರು’ ಚಿತ್ರದ ಕತೆಯಾದರೆ, ಇದರ ನಡುವೆ ಅಧಿಕೃತವಾಗಿ ಸೆಟ್ಟೇರಿದ ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೂ ನಂದಕಿಶೋರ್ ಅವರೇ ನಿರ್ದೇಶಕರು ಎಂಬುದು ಎಲ್ಲರಿಗೂ ಗೊತ್ತಿದೆ.

ಆದರೆ, ಗೊತ್ತಿರದ ಸಂಗತಿ ಎಂದರೆ ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ತೆಲುಗಿನ ಅಲ್ಲೂ ಅರ್ಜುನ್ ನಟನೆಯ ‘ಸರೈನೋಡು’ ಚಿತ್ರ ಜತೆ ಆಗಿದೆ. ಅರ್ಥಾತ್ ‘ಪೊಗರು’ ಜತೆ ಶುರು ಮಾಡುತ್ತಿದ್ದೇವೆ ಎನ್ನಲಾಗುತ್ತಿರುವ ಉದಯ್ ಮೆಹ್ತಾ ನಿರ್ಮಾಣದ ಚಿತ್ರ ಅಲ್ಲು ಅರ್ಜುನ್ ಅಬಿನಯದ ತೆಲುಗಿನ ‘ಸರೈನೋಡು’ ಚಿತ್ರದ ರೀಮೇಕ್. ಹಾಗೆ ನೋಡಿದರೆ ಇದೇ ಚಿತ್ರವನ್ನು ಮುಂದಿಟ್ಟುಕೊಂಡು ‘ಪೊಗರು’ ಚಿತ್ರದ ಕತೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಆರಂಭ ದಲ್ಲಿ ಬಂದರೂ ಅದನ್ನು ಚಿತ್ರತಂಡ ನಿರಾಕರಿಸಿ, ‘ಪೊಗರು ಅಪ್ಪಟ ಕನ್ನಡ ಕತೆ. ಸ್ವಮೇಕ್ ಸಿನಿಮಾ’ ಎಂದು ಸ್ಪಷ್ಟೀಕರಣ ನೀಡಿತ್ತು.

ಮೊದಲಿನಿಂದಲೂ ಧ್ರುವ ಸರ್ಜಾ ಜತೆ ಕೇಳಿಬರುತ್ತಿದ್ದ ‘ಸರೈನೋಡು’ ಚಿತ್ರವನ್ನು ಅಧಿಕೃತವಾಗಿ ಯಾಕೆ ರೀಮೇಕ್ ಮಾಡಬಾರದು ಎನ್ನುವ ಯೋಚನೆ ಬಂದಿದ್ದೇ ತಡ ಉದಯ್ ಮೆಹ್ತಾ ‘ಪೊಗರು’ ಜತೆ ನನ್ನ ಚಿತ್ರ ಕೂಡ ಶುರುವಾಗಲಿದೆ. ಅದಕ್ಕೂ ನಂದಕಿಶೋರ್ ಅವರೇ ನಿರ್ದೇಶಕರು ಎಂದು ಪ್ರಕಟಿಸಿಕೊಂಡಿದ್ದಾರೆ. ಹೀಗೆ ಇದ್ದಕ್ಕಿದ್ದಂತೆ ಉದಯ್ ಮೆಹ್ತಾ ಸಿನಿಮಾ ಚಾಲನೆಗೆ ಬರಲು ಕಾರಣ ಧ್ರುವ ಸರ್ಜಾರ ಅದೇ ‘ಪೊಗರು’. ಈ ಚಿತ್ರ ತಡವಾಗುತ್ತಿದೆ. ಜತೆಗೆ ಚಿತ್ರಕತೆಗೆ ಸಾಕಷ್ಟು ಸಮಯ ಬೇಕಿದ್ದು, ಆ ಗ್ಯಾಪ್‌ನಲ್ಲಿ ತೆಲುಗು ಚಿತ್ರದ ರೀಮೇಕ್‌ಗೆ ಪ್ಲಾನ್ ಮಾಡಿಕೊಂಡಿದ್ದಾರೆಂಬ ಮಾಹಿತಿ ಇದೆ.

ಹಾಗೇನಾದರೂ ಆದರೆ, ಮೂರು ಸ್ವಮೇಕ್ ಚಿತ್ರಗಳ ನಂತರ ಧ್ರುವ ಸರ್ಜಾ ಮೊದಲ ಬಾರಿಗೆ ರೀಮೇಕ್ ಚಿತ್ರದಲ್ಲಿ ನಟಿಸುವುದು ಖಾಯಂ ಆಗಲಿದೆ. ಆದರೆ, ಈ ಬಗ್ಗೆ ಚಿತ್ರತಂಡ ಎಲ್ಲೂ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಅಲ್ಲದೆ ಈ ಹಿಂದೆ ಉದಯ್ ಮೆಹ್ತಾ ತಮ್ಮ ಬ್ಯಾನರ್‌ನಲ್ಲಿ ‘ಉಯ್ಯಾಲ ಜಂಪಾಲ’ ಚಿತ್ರವನ್ನು ಕನ್ನಡದಲ್ಲಿ ‘ಕೃಷ್ಣ ರುಕ್ಕು’ ಹೆಸರಿನಲ್ಲಿ ರೀಮೇಕ್ ಮಾಡಿಸಿದ್ದರು. ಈಗ ‘ಸರೈನೋಡು’ ಚಿತ್ರಕ್ಕೆ ಕೈ ಹಾಕಿದ್ದಾರೆ. ಅಲ್ಲೂ ಅರ್ಜುನ್‌ಗೆ ಮತ್ತಷ್ಟು ಸ್ಟೈಲೀಶ್ ಇಮೇಜ್ ಜತೆಗೆ ಕಮರ್ಷಿಯಲ್ ಯಶಸ್ಸು ತಂದುಕೊಟ್ಟ ಈ ಕತೆಯ ಸ್ಪೀಡ್, ಧ್ರುವ ಸರ್ಜಾ ಅವರಿಗೆ ಹೊಂದಾಣಿಕೆ ಆಗುತ್ತದೆಂಬ ಕಾರಣಕ್ಕೂ ರೀಮೇಕ್ ಚಿತ್ರದ ಹಿಂದೆ ಬಿದ್ದಿದ್ದಾರಂತೆ.  

click me!