35ನೇ ದಿನ ಮನೆಯಿಂದ ಹೊರಬಿದ್ದ ಹಿರಿಯ ಜೀವ!

Published : Nov 24, 2018, 09:58 PM ISTUpdated : Nov 24, 2018, 10:09 PM IST
35ನೇ ದಿನ ಮನೆಯಿಂದ ಹೊರಬಿದ್ದ ಹಿರಿಯ ಜೀವ!

ಸಾರಾಂಶ

ಬಿಗ್ ಬಾಸ್‌ನ ಮನೆಯಿಂದ 5ನೇ ವಾರದ ಎಲಿಮಿನೇಶನ್ ಆಗಿದೆ. ಮನೆಯಿಂದ ಬಾಡಿ ಬಿಲ್ಡರ್ ರವಿ ಹೊರಬಿದ್ದಿದ್ದಾರೆ.

ಮೊದನಲೇ ವಾರ  ಮನೆಯ ನಾಯಕರಾಗಿ ಎಲ್ಲರಲ್ಲೂ ಶಿಸ್ತು ಮೂಡಿಸಲು ಮುಂದಾಗಿದ್ದ ರವಿ ನಂತರದ ದಿನಗಳಲ್ಲಿ ಆಟದಿಂದ ಮರೆಯಾದರು ಎಂದೇ ಹೇಳಲಾಗಿತ್ತು. ಮನೆಯವರಿಂದ ಹೇರ್ ಕಟಿಂಗ್ ಗೆ ಒಳಗಾಗಿದ್ದ ರವಿ ಮನೆಯಿಂದ ಹೊರ ನಡೆದಿದ್ದಾರೆ.

ಪ್ರತಿದಿನ ಬೆಳಗ್ಗೆ ಮನೆಯವರೆಲ್ಲರಿಗೂ ವ್ಯಾಐಆಮದ ಪಾಠ  ಹೇಳಿಕೊಡುತ್ತಿದ್ದ ರವಿ ಕಳೆದ ವಾರ ಸೋನು ಪಾಟೀಲ್ ಅವರ ಜತೆಯಲ್ಲಿನ ಚರ್ಚೆಯಲ್ಲಿ ನಾಮಿನೇಟ್ ಆಗಿದ್ದರು. ಖುಷಿಯಿಂದಲೇ ಮನೆಯಿಂದ ಹೊರ ನಡೆದಿರುವ ರವಿ ಬಾಡಿ ಬಿಲ್ಡಿಂಗ್ ಬಗ್ಗೆ ಮಾತನಾಡಿದರು. ಬಾಡಿ ಬಿಲ್ಡಿಂಗ್ ಮಾಡುವುದಕ್ಕೆ ಕೃತಕ ಆಹಾರ ಸೇವನೆ ಮಾಡಬೇಕಿಲ್ಲ. ಸರಿಯಾದ ಆಹಾರ ಕ್ರಮ, ಸಸ್ಯಹಾರದಿಂದಲೂ ಬಾಡಿ ಬಿಲ್ಡ್ ಮಾಡಲು ಸಾಧ್ಯ ಎಂದು ಹೇಳಿದರು.

ಮನೆಯವರಿಗೆ ವಂದನೆ ಹೇಳಿದ್ದಲ್ಲದೇ ಕರ್ನಾಟಕದ ಜನತೆಗೂ ರವಿ ವಂದನೆ ಸಲ್ಲಿಸಿದರು. ಶನಿವಾರದ ಕಿಚ್ಚನ ಕತೆಯಲ್ಲಿ ಕವಿತಾ ಪ್ರಕರಣ ಚರ್ಚೆಯಾಯಿತು.  ಆ್ಯಂಡಿ ಮತ್ತು ಕವಿತಾ ನಡುವಿನ ಘರ್ಷಣೆಗೆ ಒಂದು ಅರ್ಥದಲ್ಲಿ ಕವಿತಾನೇ ಕಾರಣ ಎಂಬುದನ್ನು ಕಿಚ್ಚ ಮನವರಿಕೆ ಮಾಡಿಕೊಟ್ಟರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌