ಕನ್ನಡ ನಾಡಲ್ಲಿ ಹುಟ್ಟುವ ಅದೃಷ್ಠ ನನಗಿರಲಿಲ್ಲ, ಮಕ್ಕಳಿಬ್ಬರ ಜನ್ಮ ಇಲ್ಲೆ, ರೌಜಮೌಳಿ ತಂದೆಯ ಕನ್ನಡ ಪ್ರೀತಿ

Published : Nov 25, 2026, 12:14 PM IST
Rajamouli Father Reveals His Special Bond with Karnataka

ಸಾರಾಂಶ

ಖ್ಯಾತ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕೂಡ ಸಿನಿಮಾ ಕ್ಷೇತ್ರದ ದಿಗ್ಗಜ. ವಿಶೇಷ ಅಂದರೆ ವಿಜಯೇಂದ್ರ ಪ್ರಸಾದ್ ಮದುವೆ, ಜೀವನ ಇದೇ ಕರ್ನಾಟಕದಲ್ಲಿ ಸಾಗಿತ್ತು. ರಾಜಮೌಳಿ ಹುಟ್ಟಿದ್ದು ಕರ್ನಾಟಕದಲ್ಲೇ. ವಿಜಯೇಂದ್ರ ಕನ್ನಡ ಪ್ರೀತಿ ಕೇಳಿ.

ಬೆಂಗಳೂರು (ನ.25) ಭಾರತೀಯ ಸಿನಿಮಾ ರಂಗದಲ್ಲಿ ನಿರ್ದೇಶಕ ರಾಜಮೌಳಿ ಸಿನಿ ದಿಗ್ಗಜನಾಗಿ ಗುರುತಿಸಿಕೊಂಡಿದ್ದಾರೆ. ಬಾಬುಬಲಿ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಖ್ಯಾತಿ ರಾಜಮೌಳಿಗಿದೆ. ಮೂಲತಃ ತೆಲುಗು ಸಿನಿಮಾ ನಿರ್ದೇಶಕರಾದರೂ ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಖ್ಯಾತಿ ಗಳಿಸಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕೂಡ ಸಿನಿಮಾ ದಿಗ್ಗಜ. ವಿಶೇಷ ಅಂದರೆ ವಿಜಯೇಂದ್ರ ಪ್ರಸಾದ್‌ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ರಾಜಮೌಳಿ ಹುಟ್ಟಿದ್ದು ಕರ್ನಾಟಕದಲ್ಲೇ. ವಿಜಯೇಂದ್ರ ಪ್ರಸಾದ್ ಮದುವೆಯಾಗಿದ್ದು ಕರ್ನಾಟಕದಲ್ಲೇ. ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿರುವ ವಿಜಯೇಂದ್ರ ಪ್ರಸಾದ್ ಕೆಲ ವರ್ಷಗಳ ಹಿಂದೆ ಕನ್ನಡ, ಕರ್ನಾಟಕ ಕುರಿತು ಆಡಿದ ಮಾತುಗಳು ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಕನ್ನಡ ನಾಡಿನಲ್ಲಿ ಹುಟ್ಟುವ ಅದೃಷ್ಠ ನನಗಿರಲಿಲ್ಲ

ಕೆಲ ವರ್ಷಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ವಿಜಯೇಂದ್ರ ಪ್ರಸಾದ್ ಮಾತನಾಡಿದ್ದರು. ಈ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು ಎಂದು ಡಾ.ರಾಜ್ ಕುಮಾರ್ ಹಾಡಿನ ಸಾಲುಗಳನ್ನು ಉಚ್ಚರಿಸಿ ಮಾತು ಆರಂಭಿಸಿದ್ದರು. ಇಷ್ಟೇ ಅಲ್ಲ ಈ ಮಾತು ಹೇಳಿದವರು ಕನ್ನಡ ಕಂಠೀರವ ಡಾ.ರಾಜ್‌ಕುಮಾರ್. ಈ ಮಾತು ನಿಜ. ಹುಟ್ಟಿದರೆ ಈ ಪುಣ್ಯ ಭೂಮಿಯಲ್ಲಿ ಹುಟ್ಟಬೇಕು ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದರು. ಆದರೆ ಈ ಅದೃಷ್ಠ ನನಗೆ ಇರಲಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದರು.

ನನ್ನ ಮಕ್ಕಳಿಬ್ಬರು ಹುಟ್ಟಿದ್ದು ಇಲ್ಲೆ

ಮಾತು ಮುಂದುವರಿಸಿದ ವಿಜಯೇಂದ್ರ ಪ್ರಸಾದ್, ನನಗೆ ಕನ್ನಡ ನಾಡಿನಲ್ಲಿ ಹುಟ್ಟುವ ಅದೃಷ್ಠ ಇರಲಿಲ್ಲ. ಆದರೆ ನನ್ನ ಮದುವೆ ಆಗಿದ್ದು ಇಲ್ಲೆ. ನನ್ನ ಮಕ್ಕಳಿಬ್ಬರು ಹುಟ್ಟಿದ್ದು ಇಲ್ಲೆ. ಕನ್ನಡ ತಾಯಿಯ ದೆಯೆಯಿಂದ ನನ್ನ ಮಗ ವಿಶ್ವವಿಖ್ಯಾತಗೊಂಡಿದ್ದಾನೆ. ಅವನು ಏನು ಸಾಧಿಸಿದ್ದಾನೋ, ಅಧಕ್ಕೆ ಕನ್ನಡ ತಾಯಿಯ ದಯೆ ಇದೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಕನ್ನಡ ತಾಯಿಯಲ್ಲಿ ನನ್ನದು ಒಂದೇ ಪ್ರಾರ್ಥನೆ. ನನ್ನ ಮಗನಿಗೆ ಕರುಣಿಸಿದ ಭಾಗ್ಯಗಳನ್ನು ಈ ನಾಡಿನಲ್ಲಿ ಹುಟ್ಟಿದ ಎಲ್ಲರಿಗೂ ಕರುಣಿಸು. ಕನ್ನಡ ತಾಯಿಗೆ ನನ್ನ ಪ್ರಮಾಮಗಳು ಎಂದು ವಿಜಯೇಂದ್ರ ಪ್ರಸಾದ್ ತಮ್ಮ ಭಾಷಣದಲ್ಲಿ ಹೇಳಿದ್ದರು.

ವಿಜಯೇಂದ್ರ ಪ್ರಸಾದ್ ಕುಟುಂಬ ರೈಲ್ವೇ ಕಾಮಗಾರಿಗಾಗಿ ತಮ್ಮ ಜಮೀನು ಕಳೆದುಕೊಂಡಾಗ, ವಲಸೆ ಬಂದು ಕರ್ನಾಟಕದ ರಾಯೂಚಿನಲ್ಲಿ ನೆಲೆಸಿದ್ದರು. 10ಕ್ಕೂ ಹೆಚ್ಚು ವರ್ಷ ಕರ್ನಾಟಕದಲ್ಲೇ ಜೀವನ ಸಾಗಿಸಿದ್ದರು. ಬಳಿಕ ಆಂಧ್ರ ಪ್ರದೇಶಕ್ಕೆ ಮರಳಿದ್ದರು. ಕನ್ನಡದಲ್ಲೇ ಮಾತನಾಡುವ ವಿಜಯೇಂದ್ರ ಪ್ರಸಾದ್, ಕನ್ನಡ ಭಾಷೆ ಮೇಲೆ, ಕರ್ನಾಟಕದ ಜನರ ಮೇಲೆ ಅಪಾರ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೂದಲೆಳೆ ಅಂತರದಲ್ಲಿ ಪಾರಾದ ಮೋಕ್ಷಿತಾ ಪೈ.. ಶೂಟಿಂಗ್‌ನಲ್ಲಿ ಬಿದ್ದ ಬಿಟಿಎಸ್ ವಿಡಿಯೋ ಶೇರ್ ಮಾಡಿ ನಟಿ ಹೇಳಿದ್ದೇನು?
ನೀವು ನೋಡಲೇಬೇಕಾದ 5 Underrated ಕನ್ನಡ ಥ್ರಿಲ್ಲರ್ ಸಿನಿಮಾಗಳು… ಶಿವಣ್ಣನ ಸಿನಿಮಾವೂ ಈ ಲಿಸ್ಟಲ್ಲಿದೆ…