'ಕಾಂತಾರ-1' ಕಲೆಕ್ಷನ್‌ನಲ್ಲಿ ಭಾರೀ ಕುಸಿತ; ಭಾರತೀಯ ಚಿತ್ರರಂಗದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಈಗ?

Published : Oct 15, 2025, 03:25 PM IST
Kantara Chapter 1 Box Office Collection

ಸಾರಾಂಶ

2022ರಲ್ಲಿ ತೆರೆಕಂಡ 'ಕಾಂತಾರ' ಚಿತ್ರವನ್ನು ಭಾಷೆಯ ಭೇದವಿಲ್ಲದೆ ಭಾರತೀಯ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಅವರೇ ಬರೆದು, ನಿರ್ದೇಶಿಸಿ, ದ್ವಿಪಾತ್ರದಲ್ಲಿ ನಟಿಸಿದ ಈ ಚಿತ್ರ, ಕೆಜಿಎಫ್ ನಂತರ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದ ಹೊರಗೆ ದೊಡ್ಡ ಮಟ್ಟದ ರೀಚ್ ತಂದುಕೊಟ್ಟಿತ್ತು.

ಸೋಮವಾದರ ಕಲೆಕ್ಷನ್‌ನಲ್ಲಿ ಭಾರೀ ಕುಸಿತ!

ರಿಷಬ್ ಶೆಟ್ಟಿಯ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ (Kantara Chapter 1) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆದರೆ, ಅಚ್ಚರಿ ಎನ್ನುವಂತೆ ಮೊನ್ನೆ ಸೋಮವಾರ ಕಲೆಕ್ಷನ್‌ನಲ್ಲಿ ಮೊದಲ ದೊಡ್ಡ ಕುಸಿತ ಕಂಡಿದೆ. ಆದರೂ ಕೂಡ ಈ ಸಿನಿಮಾ 12 ದಿನಗಳಲ್ಲಿ ವಿಶ್ವಾದ್ಯಂತ ಭರ್ಜರಿ ಯಶಸ್ಸು ಗಳಿಸಿದೆ. ಹಲವು ಹಳೆಯ ದಾಖಲೆಗಳನ್ನು ಕಾಂತಾರ-1 ಸಿನಿಮಾ ಪುಡಿಗಟ್ಟಿದೆ. ಹಾಗಿದ್ದರೆ ಅದೇನು ಕಥೆ, ನೋಡಿ..

2022ರಲ್ಲಿ ತೆರೆಕಂಡ 'ಕಾಂತಾರ' ಚಿತ್ರವನ್ನು ಭಾಷೆಯ ಭೇದವಿಲ್ಲದೆ ಭಾರತೀಯ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಅವರೇ ಬರೆದು, ನಿರ್ದೇಶಿಸಿ, ದ್ವಿಪಾತ್ರದಲ್ಲಿ ನಟಿಸಿದ ಈ ಚಿತ್ರ, ಕೆಜಿಎಫ್ ನಂತರ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದ ಹೊರಗೆ ದೊಡ್ಡ ಮಟ್ಟದ ರೀಚ್ ತಂದುಕೊಟ್ಟಿತು. 

ಕಾಂತಾರಕ್ಕಿಂತ ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿರುವ ಪ್ರೀಕ್ವೆಲ್ ಎಂಬ ಕಾರಣಕ್ಕೆ 'ಕಾಂತಾರ ಚಾಪ್ಟರ್ 1' ಘೋಷಣೆಯಾದಾಗಿನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಬಹುತೇಕ ಪ್ರೇಕ್ಷಕರ ನಿರೀಕ್ಷೆಗಳನ್ನು ಉಳಿಸಿಕೊಂಡಿದ್ದರಿಂದ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿತು. ಈಗ ಎರಡನೇ ವಾರ ಮುಗಿಯುತ್ತಾ ಬಂದರೂ, ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ಇದೀಗ 12 ದಿನಗಳ ಕಲೆಕ್ಷನ್ ವರದಿ ಹೊರಬಿದ್ದಿದೆ.

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸುತ್ತಿದ್ದರೂ, ರಿಲೀಸ್ ಆದ ನಂತರ ಸೋಮವಾರದ ಕಲೆಕ್ಷನ್‌ನಲ್ಲಿ ಸಿನಿಮಾ ಅತಿ ದೊಡ್ಡ ಕುಸಿತವನ್ನು ಕಂಡಿದೆ. ಸೋಮವಾರದ ಕಲೆಕ್ಷನ್‌ನಲ್ಲಿ 64 ಪ್ರತಿಶತದಷ್ಟು ಇಳಿಕೆಯಾಗಿದೆ. ಭಾನುವಾರ ಭಾರತದಿಂದ 39.75 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಸಿನಿಮಾ, ಸೋಮವಾರ ಕೇವಲ 13.50 ಕೋಟಿಗೆ ಇಳಿಯಿತು. 

ಆದರೆ, ಎರಡನೇ ವಾರಾಂತ್ಯದಲ್ಲಿ ಕಂಡ ನಾಗಾಲೋಟವು ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ಏರಿಸಿದೆ. ಈಗಾಗಲೇ ಭಾರತದಿಂದಲೇ 500 ಕೋಟಿ ಗ್ರಾಸ್ ದಾಟಿದೆ (542 ಕೋಟಿ ಗ್ರಾಸ್ ಮತ್ತು 451.90 ಕೋಟಿ ನೆಟ್). ಉತ್ತರ ಅಮೆರಿಕ ಮಾರುಕಟ್ಟೆಯಲ್ಲಿನ ಉತ್ತಮ ಪ್ರದರ್ಶನದಿಂದಾಗಿ, ವಿದೇಶದಿಂದ 11 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಸಿದೆ.

ಜಾಗತಿಕ ಕಲೆಕ್ಷನ್ ಎಷ್ಟು?

ಎರಡನೇ ವಾರಾಂತ್ಯದಲ್ಲಿ ಗಳಿಸಿದ 146 ಕೋಟಿ ಸೇರಿ, 11 ದಿನಗಳಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಿಂದ 655 ಕೋಟಿ ಗಳಿಸಿದೆ ಎಂದು ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ತಿಳಿಸಿತ್ತು. 12 ದಿನಗಳಲ್ಲಿ ಇದು 675 ಕೋಟಿಯ ಸಮೀಪ ತಲುಪಿರಬಹುದು. ಆದರೆ, ಟ್ರ್ಯಾಕರ್‌ಗಳ ಪ್ರಕಾರ, ಚಿತ್ರದ ಜಾಗತಿಕ ಗ್ರಾಸ್ ಕಲೆಕ್ಷನ್ 650 ಕೋಟಿ ಅಥವಾ ಅದಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ. 

ಛಾವಾ ಸಿನಿಮಾ ರೆಕಾರ್ಡ್ ಮುರಿಯುತ್ತಾ ಕಾಂತಾರ-1?

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, 'ಕಾಂತಾರ' ಈಗಾಗಲೇ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಟಾಪ್ 20 ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಗೆ ಸೇರಿದೆ. ಸಲ್ಮಾನ್ ಖಾನ್ ಅವರ 'ಸುಲ್ತಾನ್' (628 ಕೋಟಿ) ಮತ್ತು 'ಬಾಹುಬಲಿ 1' (650 ಕೋಟಿ) ಚಿತ್ರಗಳನ್ನು ಹಿಂದಿಕ್ಕಿ 'ಕಾಂತಾರ ಚಾಪ್ಟರ್ 1' ಈ ಸಾಧನೆ ಮಾಡಿದೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಚಿತ್ರ ಇದಾಗಿದೆ. ಬಾಲಿವುಡ್ ಚಿತ್ರ 'ಛಾವಾ' (808 ಕೋಟಿ) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯಕ್ಕಿರುವ ಅಭಿಪ್ರಾಯದ ಪ್ರಕಾರ, ಕಾಂತಾರ ಚಿತ್ರವು ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆಯನ್ನು ಮುರಿದು ಮುನ್ನಗ್ಗಲಿದೆ ಎನ್ನಲಾಗುತ್ತಿದೆ. ಕಾದು ನೋಡಬೇಕಷ್ಟೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?