
ಬಿ ಟೌನ್ ಪಡಸಾಲೆಯಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳು ಕೇಳಿ ಬರ್ತಾ ಇರುತ್ತೆ. ದಂತದ ಬೊಂಬೆ ಶ್ರೀದೇವಿ ಹಾಗೂ ಸೆಕ್ಸಿ ಕ್ವೀನ್ ಮಲೈಕಾ ನಡುವೆ ಇಂಟರೆಸ್ಟಿಂಗ್ ಘಟನೆ ನಡೆದಿದೆ.
ಇತ್ತೀಚಿಗೆ ನಡೆದ ಅವಾರ್ಡ್ ಫಂಕ್ಷನ್ ಒಂದರಲ್ಲಿ ಅವಾರ್ಡ್ ನೀಡಲು ವೇದಿಕೆ ಮೇಲೆ ಶ್ರೀದೇವಿಯನ್ನು ಕರೆಯಲಾಗಿತ್ತು. ನಿಮ್ಮ ಜೊತೆ ಮಲೈಕಾ ಕೂಡಾ ವೇದಿಕೆ ಹಂಚಿಕೊಳ್ಳುತ್ತಾರೆ ಎಂದು ಶ್ರೀದೇವಿಗೆ ಹೇಳಿದಾಗ ಕೂಡಲೇ ವೇದಿಕೆಯಿಂದಿಳಿದು ಹೋದರಂತೆ.
ಕಾರಣವೇನೆಂದರೆ ಶ್ರೀದೇವಿ ಮಲಮಗ ಅರ್ಜುನ್ ಜೊತೆ ಮಲೈಕಾ ರಿಲೇಶನ್ ಶಿಪ್ ಹೊಂದಿದ್ದಾಳೆ ಎನ್ನುವ ರೂಮರ್ ಇರುವುದರಿಂದ ಮಲೈಕಾ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಇಷ್ಟವಾಗಲಿಲ್ಲವಂತೆ. ಆದರೆ ಅರ್ಜುನ್ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಒಂದು ಕಡೆ ಲವರ್, ಇನ್ನೊಂದು ಕಡೆ ಅಮ್ಮ ನನ್ನು ಬಿಟ್ಟುಕೊಡಲಾಗದ ಸ್ಥಿತಿ ಇರಬಹುದು ಅಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.