
ಬಾಲಿವುಡ್ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ ಇಂದು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಆದರೆ, ಅವರು ಸಿನಿಮಾಗೆ ಬರುವ ಮುನ್ನ ಅವರ ವೈಯಕ್ತಿಕ ಜೀವನ ಹಲವು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಾಡೆಲ್ ಹಾಗೂ ನಟ ಮುಝಮ್ಮಿಲ್ ಇಬ್ರಾಹಿಂ, ಒಂದು ಸಂದರ್ಶನದಲ್ಲಿ ದೀಪಿಕಾ ಜೊತೆಗಿನ ತಮ್ಮ ಹಳೆಯ ಸಂಬಂಧದ ಬಗ್ಗೆ ಕೆಲವು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ಸಂಬಂಧಕ್ಕೆ ಮೊದಲು ಪ್ರಪೋಸ್ ಮಾಡಿದ್ದು ದೀಪಿಕಾ, ಆದರೆ ಬ್ರೇಕಪ್ ಮಾಡಿದ್ದು ತಾನು ಎಂದು ಅವರು ಹೇಳಿಕೊಂಡಿದ್ದಾರೆ. ಅಂದು ಮತ್ತು ಇಂದಿಗೆ ಕಾಲ ಬದಲಾಗಿದ್ದು, ದೀಪಿಕಾ ಸೂಪರ್‌ಸ್ಟಾರ್ ಆಗಿದ್ದಾರೆ, ಆದರೆ ತಮ್ಮ ಜೀವನ ಸಂಪೂರ್ಣ ಬದಲಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮುಝಮ್ಮಿಲ್, ದೀಪಿಕಾ ಅವರ ಮೊದಲ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತದೆ.
ಮುಝಮ್ಮಿಲ್ ಇಬ್ರಾಹಿಂ ಹೇಳಿದ್ದೇನು, ಪ್ರಪೋಸ್ ಮಾಡಿದ್ದು ಯಾರು?
ದೇಸಿ ಪಾಪ್ ಕಲ್ಚರ್ ಬಗ್ಗೆ ಮಾತನಾಡುತ್ತಾ, ಮುಝಮ್ಮಿಲ್ ಇಬ್ರಾಹಿಂ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅವರಿಬ್ಬರೂ ಮಾಡೆಲಿಂಗ್ ಲೋಕದಲ್ಲಿದ್ದಾಗ, ದೀಪಿಕಾ ಪಡುಕೋಣೆ ಅವರೇ ಮೊದಲು ಡೇಟ್‌ಗೆ ಕೇಳಿದ್ದರು ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಇಬ್ಬರೂ ಸ್ವಲ್ಪ ಕಾಲ ಸಂಬಂಧದಲ್ಲಿದ್ದರು ಮತ್ತು ಆ ಸಮಯದಲ್ಲಿ ತಾನು ದೀಪಿಕಾಗಿಂತ ಹೆಚ್ಚು ಜನಪ್ರಿಯನಾಗಿದ್ದೆ ಎಂದಿದ್ದಾರೆ. ಇದು ಇಬ್ಬರೂ ಒಪ್ಪಿ ಮಾಡಿಕೊಂಡ ಬ್ರೇಕಪ್ ಅಲ್ಲ ಎಂದು ಮುಝಮ್ಮಿಲ್ ಸ್ಪಷ್ಟಪಡಿಸಿದ್ದಾರೆ. "ಇದು ಪರಸ್ಪರ ಒಪ್ಪಿಗೆಯಿಂದಾದ ಬ್ರೇಕಪ್ ಆಗಿರಲಿಲ್ಲ. ನಾನೇ ಅವಳನ್ನು ಬಿಟ್ಟಿದ್ದು. ಈ ನಿರ್ಧಾರದ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ," ಎಂದು ಅವರು ಹೇಳಿದ್ದಾರೆ.
ದೀಪಿಕಾ ಸ್ಟಾರ್‌ಡಮ್ ಬಗ್ಗೆ ಈಗೇನು ಹೇಳ್ತಾರೆ?
ಕಾಲ ಬದಲಾದಂತೆ ಇಬ್ಬರ ಜೀವನವೂ ಸಂಪೂರ್ಣವಾಗಿ ಬದಲಾಗಿದೆ ಎಂದು ಮುಝಮ್ಮಿಲ್ ಒಪ್ಪಿಕೊಂಡಿದ್ದಾರೆ. "ಇವತ್ತು ಆಕೆ ಸೂಪರ್‌ಸ್ಟಾರ್, ನನ್ನನ್ನು ಯಾರಿಗೂ ಗೊತ್ತಿಲ್ಲ," ಎಂದು ಅವರು ಹೇಳಿದ್ದಾರೆ. ಆದರೂ, ತಾನು ಇಂದಿಗೂ ದೀಪಿಕಾ ಅವರ ಅಭಿಮಾನಿ ಮತ್ತು ಆಕೆ ಅತ್ಯಂತ ಸುಂದರ ಮಹಿಳೆ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ. ಸಂಬಂಧ ಮುರಿದುಬಿದ್ದಿದ್ದರೂ, ದೀಪಿಕಾ ಅವರ ಸಾಧನೆಗಳ ಬಗ್ಗೆ ಮುಝಮ್ಮಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ಅವರ ವೃತ್ತಿಜೀವನದ ಬಗ್ಗೆ ತನಗೆ ಹೆಮ್ಮೆ ಇದೆ ಮತ್ತು ಅವರು ಸ್ವಂತ ಪರಿಶ್ರಮದಿಂದ ಗಳಿಸಿದ ಯಶಸ್ಸು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಮಾತನಾಡುವುದಿಲ್ಲ. ಹೀಗಿರುವಾಗ, ಅವರ ಹಳೆಯ ಸಂಬಂಧದ ಬಗ್ಗೆ ಮುಝಮ್ಮಿಲ್ ಇಬ್ರಾಹಿಂ ನೀಡಿರುವ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಿದಾಡುತ್ತಿವೆ. ಆದರೆ, ಈ ಹೇಳಿಕೆಗಳ ಬಗ್ಗೆ ದೀಪಿಕಾ ಪಡುಕೋಣೆ ಕಡೆಯಿಂದ ಸದ್ಯಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.