ರಶ್ಮಿಕಾಗಿಂತ ಸೂಪರ್ ಕನ್ನಡ ಮಾತನಾಡಿದ ಶ್ರೀಶಾಂತ್! ವಿಡಿಯೋ ವೈರಲ್

Published : Jul 29, 2019, 03:33 PM ISTUpdated : Jul 29, 2019, 03:34 PM IST
ರಶ್ಮಿಕಾಗಿಂತ ಸೂಪರ್ ಕನ್ನಡ ಮಾತನಾಡಿದ  ಶ್ರೀಶಾಂತ್! ವಿಡಿಯೋ  ವೈರಲ್

ಸಾರಾಂಶ

  ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಸಮಾರಂಭವೊಂದರಲ್ಲಿ ಕನ್ನಡ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಕನ್ನಡದವಳಾದ ರಶ್ಮಿಕಾಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ರಶ್ಮಿಕಾ ವೇಸ್ಟ್‌ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಏನೇ ವಿಚಾರವಾದ್ರೂ ಸುತ್ತಿ ಬಳಸಿ ರಶ್ಮಿಕಾ ಮಂದಣ್ಣದತ್ತ ಮುಖ ಮಾಡುತ್ತದೆ. ಇದಕ್ಕೆಲ್ಲಾ ಕಾರಣವಾದದ್ದು ತಮಿಳು ವಾಹಿನಿಯೊಂದರಲ್ಲಿ ರಶ್ಮಿಕಾ ನೀಡಿದ ವಿವಾದಾತ್ಮಕ ಹೇಳಿಕೆ.

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ಸಮಾರಂಭವೊಂದರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಕಾಣಿಸಿಕೊಂಡ ಕ್ರಿಕೆಟಿಗ ಶ್ರೀಶಾಂತ್ 'ಎಲ್ಲರೂ ಚೆನ್ನಾಗಿದ್ದೀರಾ? ಎಂದು ಮಾತು ಶುರು ಮಾಡುತ್ತಾರೆ. ನಾನು ಫಾರಿನ್ ಸ್ಕೂಲ್ ನಲ್ಲಿ ಓದಿದ್ದು. ಹಾಗಾಗಿ ಕನ್ನಡ ಅಷ್ಟು ಚೆನ್ನಾಗಿ ಬರಲ್ಲ. ಬಟ್ ನಾನು ಕೆಂಪೇಗೌಡ-2 ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೀನಿ. ನೋಡಿ ಆಗಸ್ಟ್‌ 9 ಕ್ಕೆ ಬರ್ತಿದೆ. ಪ್ಲೀಸ್..! ' ಎಂದು ಕೇಳಿಕೊಂಡಿದ್ದಾರೆ.

ಕ್ರಿಕೆಟ್‌ ನಿಂದ ಹೊರಬಂದ ಶ್ರೀಶಾಂತ್‌ ಹಿಂದಿ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆನಂತರ ಕೆಲವೊಂದು ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕೆಲವೊಂದು ಕನ್ನಡ ಸಿನಿಮಾಗಳದಲ್ಲೂ ನಟಿಸಿದ್ದಾರೆ.

 

ಶ್ರೀಶಾಂತ್ ಕನ್ನಡದಲ್ಲಿ ಮಾತನಾಡಿದ್ದನ್ನು ಕಂಡ ಅಭಿಮಾನಿಗಳು ಅಯ್ಯೋ! ನೀವು ಕನ್ನಡದವರಲ್ಲದೇ ಇದ್ದರೂ ಎಷ್ಟು ಸೂಪರ್ ಆಗಿ ಕನ್ನಡ ಮಾತನಾಡುತ್ತೀರಾ? ಬಟ್‌ ರಶ್ಮಿಕಾ ಮಂದಣ್ಣ ಕನ್ನಡದವರೇ ಆಗಿ ಕನ್ನಡ ಕಷ್ಟ ಎಂದು ಆ್ಯಟಿಟ್ಯೂಡ್ ತೋರಿಸುತ್ತಾರೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ ಮೂಲಕವೇ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಅದ್ಯಾಕೋ ಬೇರೆ ಭಾಷೆ ಮೇಲೆಯೇ ಹೆಚ್ಚು ಆಸಕ್ತಿ ತೋರಿಸಿದರು. ರಶ್ಮಿಕಾರನ್ನು ಒಂದು ಮಟ್ಟಕ್ಕೆ ಬೆಳೆಸಿದ್ದನ್ನು ಕನ್ನಡಿಗರೇ ಎಂಬುದನ್ನು ಮರೆತರು. ಇದು ಕನ್ನಡಿಗರು ಅವರ ಮೇಲೆ ಗರಂ ಆಗುವಂತೆ ಮಾಡಿದೆ. ಬೇರೆ ಭಾಷೆಯವರೇ ಕನ್ನಡ ಮಾತನಾಡಲು ಇಷ್ಟಪಡುತ್ತಾರೆ. ಆದರೆ ನಮ್ಮವರೇ ನಮ್ಮ ಭಾಷೆಗೆ ಅನಾದರ ತೋರಿಸಿದರೆ ಇವೆಲ್ಲಾ ಕಾಮನ್ ಬಿಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!