ದರ್ಶನ್‌ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ವೈರಲ್

Published : Jun 06, 2019, 09:54 AM ISTUpdated : Jun 06, 2019, 09:57 AM IST
ದರ್ಶನ್‌ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ವೈರಲ್

ಸಾರಾಂಶ

ಸೋಷಲ್‌ ಮೀಡಿಯಾದಲ್ಲಿ ರಾಬರ್ಟ್‌ ಹವಾ | ದರ್ಶನ್‌ ಹೊಸ ಚಿತ್ರದ ಥೀಮ್‌ ಪೋಸ್ಟರ್‌ ವೈರಲ್‌ | 

ದೈತ್ಯ ಬೈಕ್‌. ಅದರ ಮೇಲೆ ಉದ್ದನೆ ಕೂದಲು ಬಿಟ್ಟಿರುವ, ಕಪ್ಪು ಜಾಕೆಟ್‌, ಕಪ್ಪು ಪ್ಯಾಂಟ್‌ ತೊಟ್ಟಿರುವ ರೆಟ್ರೋ ಸ್ಟೈಲಿನ ಸೂಪರ್‌ಹೀರೋ ದರ್ಶನ್‌. ಜಾಕೆಟ್‌ ಮೇಲೆ ಗಜ ಸಿಂಬಲ್‌, ಎದುರುಗಡೆ ಸಾಲುಗಟ್ಟಿ ನಿಂತಿರುವ ವಾಹನಗಳು... ಉಲ್ಟಾನಂಬರ್‌ ಪ್ಲೇಟ್‌. ಅದರಲ್ಲಿ ಡಿ ಬಾಸ್‌ ಎಂಬ ಹೆಸರು.

ದರ್ಶನ್‌ ಅಭಿಮಾನಿಗಳು ಹಬ್ಬ ಮಾಡಲು ಇಷ್ಟುಸಾಕಲ್ಲ. ರಾಬರ್ಟ್‌ ಚಿತ್ರದ ಈ ಥೀಮ್‌ ಪೋಸ್ಟರ್‌ ಬಿಡುಗಡೆ ಆಗಿದ್ದೇ ಆಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್‌ ಆಗಿದೆ. ಥೀಮ್‌ ಪೋಸ್ಟರ್‌ ರಿಲೀಸ್‌ ಆಗಲಿದೆ ಎಂಬ ಸುದ್ದಿಯೇ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ಪೋಸ್ಟರ್‌ ಭಾರಿ ಹವಾ ಸೃಷ್ಟಿಸಿದೆ.

ಸ್ಪೆಷಲ್‌ ಹೈರ್‌ಸ್ಟೈಲ್‌ನಲ್ಲಿ ದರ್ಶನ್‌

ದರ್ಶನ್‌ ಫ್ಯಾನ್ಸ್‌ಗೆ ಪೋಸ್ಟರ್‌ನಲ್ಲಿ ತಮ್ಮ ನೆಚ್ಚಿನ ನಟ ಮುಖ ತೋರಿಸದೇ ಇದ್ದಿದ್ದಕ್ಕೆ ಆಕ್ಷೇಪವಿದೆ. ಆದರೆ ವಿಶೇಷ ಪೋಸ್ಟರ್‌ ರಿಲೀಸ್‌ ಮಾಡಿದ್ದಕ್ಕೆ ಖುಷಿ ಇದೆ. ಇದುವರೆಗಿನ ಬಹುತೇಕ ಸಿನಿಮಾಗಳಲ್ಲಿ ದರ್ಶನ್‌ ಚಿಕ್ಕ ಕೂದಲಿನ ಹೇರ್‌ ಸ್ಟೈಲ್‌ನಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ಈಗ ಇಲ್ಲಿ ದರ್ಶನ್‌ ಉದ್ದನೆಯ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕೆಎ 19 ರಿಜಿಸ್ಪ್ರೇಷನ್‌ನ ಬೈಕ್‌ ಯಾಕೆ?

ಈ ಪೋಸ್ಟರಿನ ವಿಶೇಷತೆ ಅದರ ನಂಬರ್‌ ಪ್ಲೇಟ್‌. ಅದ್ದೂರಿ ಬೈಕಿನಲ್ಲಿ ಉಲ್ಟಾನಂಬರ್‌ ಪ್ಲೇಟ್‌ ಇದೆ. ಅದರ ಮೇಲೆ ಡಿ ಬಾಸ್‌ ಎನ್ನುವುದನ್ನು ಡಿ 8055 ಎಂಬುದಾಗಿ ಬರೆದಿದೆ. ಅಲ್ಲದೇ ಇದು ಕೆಎ 19 ರಿಜಿಸ್ಪ್ರೇಷನ್‌ ಬೈಕ್‌. ಮಂಗಳೂರಿನ ರಿಜಿಸ್ಪ್ರೇಷನ್‌ ನಂಬರ್‌. ಅಲ್ಲಿಗೆ ಚಿತ್ರದ ಕತೆಗೂ ಮಂಗಳೂರಿಗೂ ಏನೋ ಸಂಬಂಧವಿದೆ ಎನ್ನುವುದನ್ನು ಸಿಂಬಾಲಿಕ್‌ ಆಗಿ ಇಲ್ಲಿ ತೋರಿಸಲಾಗಿದೆ. ಅದು ಸತ್ಯವೂ ಹೌದು ಎನ್ನುತ್ತಾರೆ ನಿರ್ಮಾಪಕ ಉಮಾಪತಿ. ‘ರಿಜಿಸ್ಪ್ರೇಷನ್‌ ಸಂಖ್ಯೆಯನ್ನು ಸುಮ್ಮನೆ ಹಾಕಿಲ್ಲ. ಆ ಸಂಖ್ಯೆಗೂ ಕತೆಗೂ ಒಂದು ಲಿಂಕ್‌ ಇದೆ. ಅದೇನು ಅನ್ನೋದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ’ ಎನ್ನುತ್ತಾರವರು.

150 ದಿನ ಚಿತ್ರೀಕರಣ

ಉಮಾಪತಿ ನಿರ್ಮಾಣದ ಈ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಒಟ್ಟು 150 ದಿನಗಳ ಚಿತ್ರೀಕರಣ. ಪಾಂಡಿಚೇರಿ, ಉತ್ತರ ಪ್ರದೇಶ, ಹೈದರಾಬಾದ್‌ಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ನಾಯಕಿ ಆಯ್ಕೆ ಆಗಿಲ್ಲ. ಕನ್ನಡದ ನಟಿಯನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಚಿಂತನೆ ಚಿತ್ರತಂಡದ್ದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ
Anupama Gowda Weight Loss: ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?