
ಸೆಲೆಬ್ರಿಟಿಗಳಿಗೆ ಓಪನ್ ಚಾಲೆಂಜ್ ಹಾಕುವುದಾಗಿ ದರ್ಶನ್ ಹಾಕಿದ್ದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕಡೆಗೂ ಫೇಸ್ ಬುಕ್ ಲೈವ್ ಗೆ ಬಂದು ಓಪನ್ ಚಾಲೆಂಜ್ ಹಾಕಿದ್ದಾರೆ.
" ನನ್ನ ಅಭಿಮಾನಿಗಳೇ ನನ್ನ ದೊಡ್ಡ ಸೆಲಬ್ರಿಟಿಗಳು. ನನ್ನ ಕುರುಕ್ಷೇತ್ರ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ಸಾಕಷ್ಟು ಮಂದಿ ಕೆಲಸ ಮಾಡಿದ್ದಾರೆ. ಇಲ್ಲಿ ಎಲ್ಲರೂ ಸಮಾನರು. ಎಲ್ಲರೂ ಸೇರಿ ಮಾಡಿರುವ ಸಿನಿಮಾ ಕುರುಕ್ಷೇತ್ರ. ಥಿಯೇಟರ್ ನಲ್ಲಿ ಕಚ್ಚಾಡದೇ, ವಿವಾದ ಎಬ್ಬಿಸದೇ ಕೂಲ್ ಆಗಿ ಸಿನಿಮಾ ನೋಡಿ. ಇದೇ ನಾನು ನಿಮಗೆ ಕೊಡುತ್ತಿರುವ ಚಾಲೆಂಜ್‘ ಎಂದು ದರ್ಶನ್ ಹೇಳಿದ್ದಾರೆ.
ಜುಲೈ 7 ರಂದು ಕುರುಕ್ಷೇತ್ರ ಹಾಡುಗಳು ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಹಾಕಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇವೆಲ್ಲಾ ಸಣ್ಣ ಸಣ್ಣ ಸಂಗತಿಗಳು. ಬೇಸರಿಸಿಕೊಳ್ಳುವುದು ಬೇಡ ಎಂದು ಸಮಾಧಾನ ಮಾಡಿದ್ದಾರೆ. ಕುರುಕ್ಷೇತ್ರ ಸಿನಿಮಾ ವರಮಹಾಲಕ್ಷ್ಮೀ ಹಬ್ಬದಂದು ರಿಲೀಸ್ ಆಗಲಿದೆ. ಈ ಚಿತ್ರ ಭಾರೀ ಕುತೂಹಲ ಮೂಡಿಸಿದೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ನಿರ್ಮಾಪಕರು, ನಿರ್ದೇಶಕರಿಗೆ ನಷ್ಟವಾಗಬಾರದೆಂದು ಅಭಿಮಾನಿಗಳಿಗೆ ಈ ರೀತಿ ಮನವಿ ಮಾಡಿಕೊಂಡಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.