
ಕುರುಕ್ಷೇತ್ರ ಕನ್ನಡ ನಾಡಲ್ಲಿಯೇ ಹೊಸ ಅಲೆ ಎಬ್ಬಿಸಿತ್ತಿರುವ ಚಿತ್ರ. ದರ್ಶನ್ ಅಭಿಮಾನಿಗಳಲ್ಲೂ ಈ ಚಿತ್ರದ ಬಗ್ಗೆ ದಿನವೂ ಕಾತರ ಹೆಚ್ಚುತ್ತಿದೆ. ಅಷ್ಟೊಂದು ನಿರೀಕ್ಷೆಯ ಕುರುಕ್ಷೇತ್ರ ಬಿಡುಗಡೆ ಆಗ್ತಿಲ್ಲ ಅನ್ನೊ ಬೇಸರ ಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ,ಸಿನಿಮಾ ತೆರೆಗೆ ಬರದಿರುವುದಕ್ಕೆ ಕಾರಣ ಬೇರೆ ಏನೋ ಅಲ್ಲ ಅದು ವಿಧಾನಸಭಾ ಚುನಾವಣೆ.
ಚಿತ್ರಕ್ಕೆ ದುಡ್ಡು ಹಾಕಿರೋದು ಶಾಸಕ ಮುನಿರತ್ನ. ಚುನಾವಣಾ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಓಪನ್ ಸಿಕ್ರೇಟ್. ಆದರೆ ಚಿತ್ರತಂಡ ಹೇಳುವುದು ಬೇರೆ. ಸಿನಿಮಾ ಸಿದ್ಧವಾಗಿದೆ. ಚುನಾವಣೆ ಪ್ರಕಟಣೆಯಾದ ಕಾರಣ ಎಲ್ಲವೂ ಮುಂದಕ್ಕೆ ಹೋಗಿದೆ ಎನ್ನುತ್ತಿದೆ. ನಿರ್ಮಾಪಕ ಮುನಿರತ್ನ ಅವರು ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡರು. ಅದಕ್ಕಾಗಿ ಬಿಡುಗಡೆ ನಿಧಾನ ಅಂತಿದೆ ಸಿನಿಮಾ ತಂಡ. ಚುನಾವಣೆ ಮುಗಿದ ನಂತರ ಕೆಲವೇ ದಿನಗಳಲ್ಲಿ ತೆರೆಕಾಣಲಿದೆಯಂತೆ ಕುರುಕ್ಷೇತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.