
ಉಮಾಪತಿ ನಿರ್ಮಾಣ ಹಾಗೂ ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದು, ಅದು 53ನೇ ಸಿನಿಮಾವಾಗಿ ಹೊರ ಬರಲಿದೆ ಎನ್ನುವುದು ಈ ಹಿಂದೆಯೇ ಸುದ್ದಿ ಆಗಿತ್ತು. ಅದೀಗ ಪಕ್ಕಾ ಆಗಿದೆ. ಹಬ್ಬದ ದಿನ ಮಂಗಳವಾರ ಸಂಜೆ ದರ್ಶನ್ ಅವರೇ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ೫೩ನೇ ಚಿತ್ರದ ಮೊದಲ ಪೋಸ್ಟರ್ ಲಾಂಚ್ ಮಾಡಿದ್ದಾರೆ.
ಸದ್ಯಕ್ಕೆ ಅದರ ಟೈಟಲ್ ಏನು ಅನ್ನೋದು ನಿಗೂಢ. ಆದರೆ ಡಿ 53 ಎನ್ನುವ ಸಂಕೇತದೊಂದಿಗೆ ಚಿತ್ರದ ಮೊದಲ ಪೋಸ್ಟರ್ ಲಾಂಚ್ ಆಗಿದೆ. ದರ್ಶನ್ ಟ್ವಿಟರ್ ಖಾತೆಗೆ ಅದು ಅಪ್‌ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಫೇಸ್‌ಬುಕ್. ಇನ್ಸ್ಟಾಗ್ರಾಮ್, ವಾಟ್ಸಾಫ್‌ಗಳಲ್ಲಿ ವೈರಲ್ ಆಯಿತು. ಆ ಪೋಸ್ಟರ್ ನಲ್ಲಿ ದರ್ಶನ್ ಕಾಣಿಸಿಕೊಂಡ ರೀತಿಯಲ್ಲೇ ಅಭಿಮಾನಿಗಳು ತಮ್ಮದೇ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ವಾಹನಗಳ ಮೇಲೂ ಆ ಚಿತ್ರದ ಪೋಸ್ಟರ್ ರಾರಾಜಿಸುತ್ತಿದೆ.
ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಜೋಡಿಯ ಸಿನಿಮಾದ ಕತೆ ಇದಾದರೆ, ಮತ್ತೊಂದೆಡೆ ದರ್ಶನ್ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಮತ್ತೆ ಒಂದಾಗುತ್ತಿರುವ ಸುದ್ದಿ ಹೊರ ಬಿದ್ದಿದೆ.‘ ತಾರಕ್ ’ಚಿತ್ರದ ನಂತರ ದರ್ಶನ್ ಅವರಿಗೆ ಮಿಲನ ಪ್ರಕಾಶ್ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರೆನನ್ನುವುದು ಈಗಿರುವ ಸುದ್ದಿ. ಸದ್ಯಕ್ಕೆ ಮಿಲನ ಪ್ರಕಾಶ್ ನಿರ್ದೇಶನದ ಸಿನಿಮಾದ ಹೆಚ್ಚಿನ ಮಾಹಿತಿ ಈಗ ಬಹಿರಂಗಗೊಂಡಿಲ್ಲ. ದರ್ಶನ್ ಜತೆಗೆ ಮಿಲನ ಪ್ರಕಾಶ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆನ್ನುವ ಮಾಹಿತಿ ಮಾತ್ರ ಹೊರಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.