
ಬೆಂಂಗಳೂರು (ಸೆ. 01): ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ತಿಗೊಂಡಿದೆ.
ಈ ವಾರ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿತ್ರದ ಹಾಡಿನ ಡಾನ್ಸ್ ಚಿತ್ರೀಕರಣ ನಡೆಯುತ್ತಿತ್ತು. ದರ್ಶನ್, ತಾನ್ಯಾ ಹೋಪ್ ಡಾನ್ಸ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾರೋ ಒಬ್ಬರು ಫೋಟೋ ತೆಗೆದಿದ್ದು ಮತ್ತು ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದು ದೊಡ್ಡ ಸುದ್ದಿಯಾಗಿತ್ತು.
ಈಗ ತಾನ್ಯಾ ಹೋಪ್ ನರ್ತನದ ಫೋಟೋ ಸಿಕ್ಕಿದ್ದು, ಈ ಫೋಟೋ ಕಾರಣದಿಂದಾಗಿಯೇ ದರ್ಶನ್ ಸಿಟ್ಟಾಗಿದ್ದರಾ ಎಂಬ ಅನುಮಾನ ಮೂಡಿದೆ.
ಈ ಫೋಟೋದಲ್ಲಿ ಅದ್ಧೂರಿ ಸೆಟ್‌ನ ಮಧ್ಯೆ ತಾನ್ಯಾ ಹೋಪ್ ಡಾನ್ಸರ್‌ಗಳ ಜೊತೆ ನಿಂತಿರುವುದನ್ನು ಗಮನಿಸಬಹುದು. ಈ ಚಿತ್ರವನ್ನು ಪಿ. ಕುಮಾರ್ ನಿರ್ದೇಶಿಸುತ್ತಿದ್ದಾರೆ. ಬಿ.ಸುರೇಶ್, ಶೈಲಜಾನಾಗ್ ನಿರ್ಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.