ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

Published : Dec 04, 2018, 12:13 PM IST
ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

ಸಾರಾಂಶ

ಪುನೀತ್ ರಾಜ್‌ಕುಮಾರ್ ಮತ್ತೊಂದು ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಹೌಸ್ ನಿರ್ಮಾಣದ ಮೂರನೇ ಚಿತ್ರ ಆರಂಭವಾಗಿದೆ.  

‘ಕವಲುದಾರಿ’, ‘ಮಾಯ ಬಜಾರ್’ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿವೆ. ಅದರ ಬೆನ್ನಲ್ಲೇ ಪನ್ನಗ ಭರಣ ನಿರ್ದೇಶನ ಹಾಗೂ ದಾನೀಶ್ ಸೇಠ್ ಅಭಿನಯದೊಂದಿಗೆ ಮೂರನೇ ಚಿತ್ರ ಶುರುವಾಗುತ್ತಿದೆ. ಸೋಮವಾರ ಅದರ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

ಪುನೀತ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ, ನಾಯಕ ನಟ ದಾನೀಶ್ ಸೇಠ್ ಇದ್ದರು. ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ದಾನೀಶ್ ಸೇಠ್ ಈ ಚಿತ್ರದ ನಾಯಕ. ದಿಶಾ ಮದನ್ ನಾಯಕಿ. ಅವರಿಗಿದು ಮೊದಲ ಚಿತ್ರ. ಈಗಾಗಲೇ ಶಿವರಾಜ್ ಕುಮಾರ್ ನಿರ್ಮಾಣದ ‘ಹೇಟ್ ಯು ರೋಮಿಯೋ’ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ ದಿಶ್. ಫ್ರೆಂಚ್ ನಿವಾಸಿ ಬ್ರಿಟಿಷ್ ಮೂಲದ ಶಾಲಿ ಯುಸೂಫ್ ಕೂಡ ಚಿತ್ರದ ಮತ್ತೊಂದು ಪ್ರಮುಖ ಪಾತ್ರಧಾರಿ.

‘ಈ ಕತೆಯಲ್ಲಿ ಇರುವುದು ಇಬ್ಬರು ಆಟೋ ಡ್ರೈವರ್ಸ್. ಒಬ್ಬ ಫ್ರೆಂಚ್‌ನಿಂದ ಬಂದು ಬೆಂಗಳೂರಿನ ಶಿವಾಜಿ ನಗರದಲ್ಲಿ ಆಟೋ ಓಡಿಸುವವ. ಮತ್ತೊಬ್ಬ ಶಿವಾಜಿನಗರದಲ್ಲೇ ಇದ್ದು ಆಟೋ ಓಡಿಸುವವ ವ್ಯಕ್ತಿ. ಅವರಿಬ್ಬರ ನಡುವಿನ ಸ್ವಾರಸ್ಯಕರ ಕತೆಯೇ ಈ ಚಿತ್ರ’ ಎನ್ನುತ್ತಾರೆ ನಿರ್ದೇಶಕ ಪನ್ನಗಭರಣ.

‘ತುಂಬಾ ಫ್ರೆಶ್ ಕತೆ ಊಟಜ. ಅದೇ ಕಾರಣದಿಂದಲೇ ಪುನೀತ್ ರಾಜ್‌ಕುಮಾರ್ ಅವರು ಕತೆ ಒಪ್ಪಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದರು. ಕತೆ ಕೇಳುವಾಗಲೇ ಅವರು ಬಿದ್ದು ಬಿದ್ದು ನಕ್ಕರು. ಚೆನ್ನಾಗಿ ಸಿನಿಮಾ ಮಾಡಿ ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟರು. ಅಲ್ಲಿಂದ ಶುರುವಾಯಿತು ಈ ಸಿನಿಮಾ ವರ್ಕ್. ಸದ್ಯ ಚಿತ್ರಕ್ಕೆ ಮೂವರು ಕಲಾವಿದರು ಮಾತ್ರ ಫೈನಲ್ ಆಗಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ಈ ವಾರದಲ್ಲಿ ಫೈನಲ್ ಆಗುತ್ತೆ. ಆ ಮೇಲೆ ಚಿತ್ರೀಕರಣ ಶುರು’ ಎಂದರು ನಿರ್ದೇಶಕರು. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?