
ಮುಂಬೈ(ಜೂ.14): ತಮ್ಮ ಡ್ಯಾನ್ಸ್ ಸ್ಟೆಪ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ 'ಡ್ಯಾನ್ಸಿಂಗ್ ಅಂಕಲ್' ಇದೀಗ ತಮ್ಮ ಆರಾಧ್ಯ ನಟ ಗೋವಿಂದ ಅವರನ್ನು ಕೊನೆಗೂ ಭೇಟಿ ಮಾಡಿದ್ದಾರೆ.
ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ನಡೆಸಿಕೊಡುವ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಕಾರ್ಯಕ್ರಮದ ವೇದಿಕೆ ಮೇಲೆ ಸಂಜೀವ್ ಶ್ರೀವಾತ್ಸವ್ ಹಾಗೂ ನಟ ಗೋವಿಂದ್ ಒಂದೇ ಹಾಡಿಗೆ ಹೆಜ್ಜೆ ಹಾಕಿದರು. ಇಬ್ಬರು ವೇದಿಕೆ ಮೇಲೆ ಕುಣಿದು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.
ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್, 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ `ಖುದ್ಗರ್ಜ್' ಚಿತ್ರದ ಆಪ್ ಕೆ ಆ ಜಾನೆ ಸೆ' ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ಅಪ್ ಲೋಡ್ ಮಾಡಲಾಗಿತ್ತು.
ಡ್ಯಾನ್ಸಿಂಗ್ ಅಂಕಲ್ ಎಂದೇ ಖ್ಯಾತರಾಗಿರುವ 40ರ ಹರೆಯದ ಸಂಜೀವ್ ಶ್ರೀವಾತ್ಸವ್, ಭೋಪಾಲ್ ನ ಬಾಬಾ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.