ಮಜಾ ಟಾಕೀಸ್‌ಗೆ ಫುಲ್‌ ಸ್ಟಾಪ್; ಸೃಜನ್ ಕಾಮಿಡಿ ಮುಗೀತು!

By Web Desk  |  First Published Oct 5, 2019, 10:34 AM IST

ಕಲರ್ಸ್‌ ಸೂಪರ್‌ನಲ್ಲಿ ವಾರಾಂತ್ಯಕ್ಕೆ ಪ್ರಸಾರವಾಗುತ್ತಿದ್ದ ಸೃಜನ್‌ ಲೋಕೇಶ್‌ ಸಾರಥ್ಯದ ಮಜಾ ಟಾಕೀಸ್‌ ಕಾರ್ಯಕ್ರಮ ಕೊನೆಯಾಗುತ್ತಿದೆ. ಅಕ್ಟೋಬರ್‌ 6ರಂದು ಈ ಕಾರ್ಯಕ್ರಮದ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ.


ತಮಾಷೆಗಳಿಂದಾಗಿಯೇ ಜನರ ಮನ ಗೆದ್ದಿದ್ದ ಮಜಾ ಟಾಕೀಸ್‌ ಪ್ರೇಕ್ಷಕರನ್ನು ನಗಿಸಿ ಒಂದೊಳ್ಳೆಯ ವಾತಾವರಣ ಸೃಷ್ಟಿಸುತ್ತಿತ್ತು. ನೋಡುಗರು ನಕ್ಕು ಹಗುರಾಗುತ್ತಿದ್ದರು. ಆದುದರಿಂದಲೇ ಮಜಾ ಟಾಕೀಸ್‌ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಜನರನ್ನು ತಲುಪಿತ್ತು.

ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌!

Tap to resize

Latest Videos

undefined

ಇದೀಗ ಈ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಳೆ ಸಂಜೆ 8 ಗಂಟೆಗೆ ಕೊನೆಯ ಎಪಿಸೋಡು ಪ್ರಸಾರವಾಗಲಿದೆ. ಈ ಎಪಿಸೋಡಿನಲ್ಲಿ ಹರಿಪ್ರಿಯಾ, ತಾರಾ, ಸಿಹಿಕಹಿ ಚಂದ್ರು, ಮಾನ್ವಿತಾ ಹರೀಶ್‌, ರಾಧಿಕಾ ಭಾಗವಹಿಸುತ್ತಿದ್ದಾರೆ.

ಡಿಪ್ರೆಷನ್ ನಿಂದ ಮೇಲೆದ್ದು ಗೆದ್ದ ಹಾಸ್ಯನಟ

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 

click me!