ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಮತ್ತು ಕಂಟೆಂಟ್ ಇರುವ ‘ಗಂಟುಮೂಟೆ’ ಚಿತ್ರಕ್ಕೆ ಥಿಯೇಟರ್ ಭಾಗ್ಯ ಸಿಕ್ಕಿದೆ. ಖುಷಿಯಲ್ಲೇ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ನಿರ್ದೇಶಕಿ ರೂಪಾ ರಾವ್ ತಮ್ಮ ತಂಡದೊಂದಿಗೆ ಆಗಮಿಸಿ ಮತ್ತೊಮ್ಮೆ ‘ಗಂಟುಮೂಟೆ’ ವಿಷಯ ತೆರೆದಿಟ್ಟು.
ಹೈಸ್ಕೂಲ್ ಹುಡುಗಿಯೊಬ್ಬಳ ಬಯೋಗ್ರಫಿಯಂತೆ ಸಾಗುವ ಈ ಸಿನಿಮಾದಲ್ಲಿ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟಿಸಿರುವುದು ಚಿತ್ರದ ಹೈಲೈಟ್. ಒಂದು ನವಿರಾದ ಹೈಸ್ಕೂಲ್ ಪ್ರೇಮ ಕತೆಯನ್ನು ನಿತ್ಯದ ಬದುಕಿನ ಜತೆ ನೋಡುವ ಮತ್ತು ಆ ಪ್ರೇಮದಿಂದ ಆಗುವ ತಲ್ಲಣಗಳ ಸುತ್ತ ಈ ಬಂದಿದೆ ಎಂಬುದು ನಿರ್ದೇಶಕಿ ಕೊಟ್ಟಪ್ರಾಥಮಿಕ ವರದಿ.
'ಗಂಟುಮೂಟೆ' ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟ ಪ್ರಕಾಶ್ ಬೆಳವಾಡಿ ಪುತ್ರಿ ತೇಜು!
ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ತಮಿಳು ನಟ ವಿಶಾಲ್ ಚಿತ್ರದ ಟ್ರೇಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಸಿಕ್ಕಿರುವ ದಸರಾ ಗಿಫ್ಟ್. ಮುಂದಿನ ವಾರ ಮೈಸೂರು ಟಾಕೀಸ್ ಮೂಲಕ ಸಿನಿಮಾ ತೆರೆಗೆ ಬರುತ್ತಿದೆ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಲಾಗುತ್ತಿದೆ.
ತೊಂಭತ್ತರ ಕಾಲಘಟ್ಟದಲ್ಲಿ ನಡೆಯುವ ಕತೆಯಲ್ಲಿ ವಿದ್ಯಾಭ್ಯಾಸದ ಒತ್ತಡ, ಶಾಲೆಯ ವಾತಾವರಣ, ಅಂಕ ಪಡೆಯಲು ಸ್ಪರ್ಧೆ, ತರಲೆ, ಹದಿಹರೆಯದ ಆಕರ್ಷಣೆ, ಗಲಾಟೆ. ಇವುಗಳ ನಡುವೆ ಕಾಡುವ ಮೊದಲ ಪ್ರೇಮ.ಇವೆಲ್ಲವು ಚಿತ್ರದ ಅಂಶಗಳು. ತೀರ್ಥಹಳ್ಳಿ ಮೂಲದ ನಿಶ್ವಿತ್ ಕೊರೋಡಿ ಹಾಗೂ ತೇಜು ಬೆಳವಾಡಿ ಚಿತ್ರದ ಜೋಡಿ.
ಭಾರ್ಗವ್‌ರಾಜು, ಸೂರ್ಯವಸಿಷ್ಟ, ಶರತ್‌ಗೌಡ, ಶ್ರೀರಂಗ, ಅರ್ಚನಾ ಶ್ಯಾಮ್, ಚಂದನ ಮುಂತಾದವರು ನಟಿಸಿದ್ದಾರೆ. ಐಟಿ ಉದ್ಯೋಗ ತ್ಯಜಿಸಿ, ಚಿತ್ರರಂಗಕ್ಕೆ ಬಂದಿರುವ ರೂಪಾರಾವ್, ಮೊದಲ ಪ್ರಯತ್ನದಲ್ಲೇ ಒಳ್ಳೆಯ ಸಿನಿಮಾ ಮಾಡಿರುವ ಸಂಭ್ರಮ ಇದೆ. ಅಕ್ಟೋಬರ್ 18ರಂದು ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಪ್ರಜಿತ್ ಸಂಗೀತ, ಸಹದೇವ್ ಕೆಲ್ವಾಡಿ ಕ್ಯಾಮೆರಾ ಹಿಡಿದಿದ್ದಾರೆ.