ಸೂಪರ್ ಮಿನಿಟ್ ಸೀಸನ್ 4 ಮತ್ತೆ ಗೋಲ್ಡನ್ ಸ್ಟಾರ್ ಜೊತೆ

Published : Sep 16, 2018, 02:42 PM ISTUpdated : Sep 19, 2018, 09:27 AM IST
ಸೂಪರ್ ಮಿನಿಟ್ ಸೀಸನ್ 4 ಮತ್ತೆ ಗೋಲ್ಡನ್ ಸ್ಟಾರ್ ಜೊತೆ

ಸಾರಾಂಶ

ಕಿರುತೆರೆಯ ಕೆಲವು ರಿಯಾಲಿಟಿ ಶೋಗಳು ವೀಕ್ಷಕರ ಹೃದಯ ಗೆದ್ದರೆ, ಮತ್ತೆ ಕೆಲವು ನಗದು ಗೆಲ್ಲುವಂತೆ ಮಾಡಿವೆ. ಅಂಥವುಗಳಲ್ಲಿ ಒಂದು ಸೂಪರ್ ಮಿನಿಟ್ ಮತ್ತೆ ಕಿರುತೆರೆಯಲ್ಲಿ ರಾರಾಜಿಸಲಿದೆ.

ಕಿರುತೆರೆಯ ಪ್ರಖ್ಯಾತ ಗೇಮ್ ಶೋ ಮಿನಿಟ್ ವೇಸ್ಟ್ ಮಾಡದೆ ಮಿನಿಟ್‌ನಲ್ಲಿ ಲಕ್ಷ ಗೆಲ್ಲೋ ಆಟ ಸೂಪರ್ ಮಿನಿಟ್ ಮತ್ತೆ ಸೆ.29 ರಿಂದ  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಗಾಗಲೆ 3 ಸೀಸನ್‌ಗಳಲ್ಲಿ ಹಲವಾರು ಗಣ್ಯರು ಮತ್ತು ಸಾಮಾನ್ಯರು ಭಾಗವಹಿಸಿ, ನಿಮಿಷದಲ್ಲಿ ಲಕ್ಷ ಗೆದ್ದಿದ್ದಲ್ಲದೇ, ಮಿನಿಟ್ ಮಹತ್ವವನ್ನೂ ಅರಿತುಕೊಂಡಿದ್ದಾರೆ. ಇಗ ಮತ್ತೆ ಅದೇ ಸಾಲಿನಲ್ಲಿ ನೀವು ಸೆರಬೇಕಾ? ಹಾಗಾದರೆ ಮಿಸ್ ಮಾಡಿ ಕೊಳ್ಳಬೇಡಿ.......

ಗೋಲ್ಡನ್ ಸ್ಟಾರ್ ಗಣೇಶ್ ಈ ಕಾರ್ಯಕ್ರಮದ ನಿರೂಪಕರಾಗಲಿದ್ದಾರೆ. ಆಯ್ಕೆ ಪ್ರಕ್ರಿಯೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದೆ. ಹಿಂದೆ ಗೆದ್ದವರಲ್ಲಿ ಕೆಲವರು ಈ ಹಣವನ್ನು ಮನೆಗೆ ಕೊಂಡೊಯ್ದಿದ್ದರೆ, ಮತ್ತೆ ಕೆಲವರು ದಾನ ಧರ್ಮಕ್ಕೆಂದು ಕೈ ಎತ್ತಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಲಕ್ಷ ಗೆಲ್ಲೋ ಅವಕಾಶವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!