
ಬೆಂಗಳೂರು (ಆ. 29): ನಾನೇ ಎಂದು ಬೀಗಬೇಡ ಸೋತವರನ್ನು ಕಂಡಿದ್ದೇವೆ ! ಬಹುಶಃ ಈ ಮಾತು ಈ ಸಂದರ್ಭದಲ್ಲಿ ಸಮೀರ್ ಆಚಾರ್ಯರಿಗೆ ಒಪ್ಪುತ್ತದೆ. ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಸಮೀರ್ ಆಚಾರ್ಯ ಭಾಗವಹಿಸಿದ್ದರು. ಇದರಲ್ಲಿ ನಿರೂಪಕ ರಮೇಶ್ ಅರವಿಂದ್ ರಾಮಾಯಣದ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾರೆ. ರಾಮಾಯಣದ ಪ್ರಕಾರ ಶೂರ್ಪನಖಿ ತಾಯಿ ಯಾರು? ಎನ್ನುವ ಪ್ರಶ್ನೆಗೆ ಸಮೀರ್ ಆಚಾರ್ಯ ದಿತಿ ಎನ್ನುತ್ತಾರೆ.
ಎರಡೆರಡು ಬಾರಿ ಕೇಳಿದ ನಂತರ ಆ ಉತ್ತರವನ್ನು ರಮೇಶ್ ಅರವಿಂದ್ ಲಾಕ್ ಮಾಡುತ್ತಾರೆ. ಆಗ ಸಮೀರ್ ಪತ್ನಿ ಬಳಿ ಉತ್ತರ ಕೇಳಿದಾಗ ಅವರು ಕೈಕೇಸಿ ಎನ್ನುತ್ತಾರೆ. ಕೋಪಗೊಂಡ ಆಚಾರ್ಯರು ನಾನು ರಾಮಾಯಣ ಓದಿದೀನಾ? ನೀನು ಓದಿದೀಯಾ ಎಂದು ಗದರುತ್ತಾರೆ. ಕೊನೆಗೆ ಅವರ ಪತ್ನಿಯ ಉತ್ತರವೇ ಸರಿಯಾಗಿರುತ್ತದೆ.
ಸಮೀರ್ ಆಚಾರ್ಯರ ಈ ನಡವಳಿಕೆ ಸಾರ್ವಜನಿಕ ಟೀಕೆಗೆ ಗ್ರಾಸವಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಕನ್ನಡದ ಕೋಟ್ಯಾಧಿಪತಿಯ ವಿಡಿಯೋ ತುಣುಕು ಇಲ್ಲಿದೆ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.