ಕಾಲಲ್ಲಿ ಶಕ್ತಿ ಇಲ್ಲದೇ ಇದ್ದರೆ ಏನಂತೆ, ಒಳ್ಳೆಯ ಜ್ಞಾನವಿದೆ. ಆ ಜ್ಞಾನದ ಬಲದಿಂದಲೇ ಪುನೀತ್ ರಾಜ್‌ಕುಮಾರ್ ಕೇಳಿದ ಪ್ರಶ್ನೆಗಳಿಗೆಲ್ಲಾ ಪಟಪಟನೆ ಉತ್ತರ ಕೊಟ್ಟು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಚಿತ್ರದುರ್ಗದ ಗಟ್ಟಿಗ ರಂಗನಾಥ್.
ಐದನೇ ವಯಸ್ಸಿಗೆ ಎರಡೂ ಕಾಲಿನ ಶಕ್ತಿ ಕಳೆದುಕೊಂಡ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಳಗೂರು ಗ್ರಾಮದ ರಂಗನಾಥ್ ಬಡತನದಲ್ಲಿಯೇ ಬೆಳೆದು ಬಂದವರು. ಕಾಲು ತನ್ನ ಶಕ್ತಿ ಕಳೆದುಕೊಂಡರೆ ಏನಂತೆ, ನನ್ನ ಬುದ್ಧಿ ಶಕ್ತಿಯನ್ನೇ ಬಳಸಿಕೊಂಡು ಜೀವನದ ಸ್ಪರ್ಧೆಯಲ್ಲಿ ಓಡುತ್ತೇನೆ, ಗೆಲ್ಲುತ್ತೇನೆ ಎನ್ನುವ ರಂಗನಾಥ್ ಪಿಯುಸಿ ಮುಗಿಸಿ ನಂತರ ಟಿಸಿಎಚ್ ಮಾಡಿಕೊಂಡು ಸ್ವಗ್ರಾಮವಾದ ಬೆಳಗೂರಿನಲ್ಲಿ ಚಿಕ್ಕ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದಾರೆ. ಹಾಗಾಗಿ ಇಡೀ ಊರಿನಲ್ಲಿಯೇ ಇವರು ಟ್ಯೂಷನ್ ರಂಗನಾಥ್ ಎಂದೇ ಪ್ರಸಿದ್ಧರು. ಈಗ ಆತ್ಮವಿಶ್ವಾಸದಿಂದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಬಂದ ರಂಗನಾಥ್ ಒಳ್ಳೆಯ ಪ್ರದರ್ಶನವನ್ನು ನೀಡುತ್ತಿದ್ದಾರೆ.
'ಕೋಟ್ಯಧಿಪತಿ'ಯಲ್ಲಿ ಐಎಎಸ್ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!
undefined
ರಂಗನಾಥ್ ಅವರಿಗೆ ಕಾಲಿನ ಸಮಸ್ಯೆಯಿಂದಾಗಿ ಓಡಾಡುವುದು ದೊಡ್ಡ ಸಮಸ್ಯೆ. ಹಾಗೆಂದು ಯಾರಾದರೂ ಅನುಕಂಪ ತೋರಿಸುವುದು ಅವರಿಗೆ ಇಷ್ಟವಿಲ್ಲ. ಸ್ವಾವಲಂಬಿಯಾಗಿ ಬದುಕಬೇಕು ಎಂಬುದಕ್ಕಾಗಿ ಒಂದು ಪವರ್ ವ್ಹೀಲ್‌ಚೇರ್ ಖರೀದಿಸಬೇಕು ಎಂಬುದು ಅವರ ಕನಸು. ಕನ್ನಡದ ಕೋಟ್ಯಧಿಪತಿಯಲ್ಲಿ ಗೆಲ್ಲುವ ಹಣದಿಂದ ಅದನ್ನು ಖರೀದಿಸುವುದು ಅವರ ಉದ್ದೇಶ. ರಂಗನಾಥ್ ಅವರ ಕನಸಿಗೆ ಬಲ ನೀಡಬಲ್ಲ ಪವರ್ ವ್ಹೀಲ್‌ಚೇರ್ ಖರೀದಿಸಲು ಅವರಿಗೆ ಸಾಧ್ಯವಾಯಿತೇ ಎಂಬುದನ್ನು ಇದೇ ಶನಿವಾರ ರಾತ್ರಿ 8ಗಂಟೆಗೆ (ಜು. 27) ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ನೋಡಬಹುದು.
ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!
ಎಲ್ಲರಿಗೂ ನೀವು ಸ್ಫೂರ್ತಿ ಎಂದ ಪುನೀತ್
ಹೀಗೆ ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ರಂಗನಾಥ್ ಎಲ್ಲರಿಗೂ ಸ್ಫೂರ್ತಿ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರೆ, ‘ಅಸಂಖ್ಯಾತ ಕನಸುಗಳನ್ನು ಹೊತ್ತುತರುವ ಜನಸಾಮಾನ್ಯರ ಕನಸುಗಳನ್ನು ನನಸು ಮಾಡಲು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಸಾಧ್ಯವಾಗುತ್ತಿದೆ. ಅವರಲ್ಲಿರುವುದು ಆತ್ಮವಿಶ್ವಾಸ ಮತ್ತು ಜ್ಞಾನ ಮಾತ್ರ. ಆ ರೀತಿಯ ವ್ಯಕ್ತಿಗಳಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ರಂಗನಾಥ್’ ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಮತ್ತು ಕನ್ನಡದ ಕೋಟ್ಯಧಿಪತಿ ನಿರ್ದೇಶಕರಾದ ಪರಮೇಶ್ವರ ಗುಂಡ್ಕಲ್.