ದರ್ಶನ್‌ ಕೈ ಸೇರಿದ ‘ಭೀಮ'; ಸರ್ಜಾ ಕುಟುಂಬದಿಂದ ಸ್ಪೆಷಲ್‌ ಗಿಫ್ಟ್‌

Published : Jul 14, 2019, 01:07 PM IST
ದರ್ಶನ್‌ ಕೈ ಸೇರಿದ ‘ಭೀಮ'; ಸರ್ಜಾ ಕುಟುಂಬದಿಂದ ಸ್ಪೆಷಲ್‌ ಗಿಫ್ಟ್‌

ಸಾರಾಂಶ

ಪ್ರಾಣಿಪ್ರಿಯ ನಟ ದರ್ಶನ್‌ಗೆ ಮಿಸ್ಟರ್ ಆ್ಯಂಡ್ ಮಿಸಸ್ ಚಿರಂಜೀವಿ ಸರ್ಜಾ 'ಭೀಮ'ನನ್ನು ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಹಂಗೆ ನೋಡಿ. ಯಾರನ್ನೇ ಕಂಡರೂ ಪ್ರೀತಿ, ಗೌರವದಿಂದ ಮಾತನಾಡಿಸುತ್ತಾರೆ. ಅಂಗಲಾಚಿ ಸಹಾಯ ಬೇಡಿದವರಿಗೆ ಭೂಲೋಕದ ಕರ್ಣ.

ಇತ್ತೀಚಿಗಂತೂ ಸ್ಯಾಂಡಲ್‌ವುಡ್‌ನಲ್ಲಿ ಯಾರೇ ಸಿನಿಮಾ ಮುಹೂರ್ತ, ಟ್ರೇಲರ್ ಹಾಗೂ ಹಾಡಿನ ಲಾಂಚ್‌ಗೆ ಡಿ-ಬಾಸ್ ಬೇಕೇಬೇಕು ಅನ್ನುತ್ತಾರೆ. ಎಷ್ಟೇ ಟೈಟ್‌ ಶೆಡ್ಯೂಲ್ ಇದ್ದರೂ ಹಾಜರಾಗಿ ತನ್ನ ಸ್ವಂತ ಸಿನಿಮಾದಂತೆ ನಡೆಸಿ ಕೊಡುತ್ತಾರೆ. ಕುಟುಂಬಸ್ಥರಂತೆ ಸಹಾಯ ಮಾಡಿ ಪ್ರೀತಿ ತೋರಿಸಿದ ದರ್ಶನ್‌ಗೆ ಮೇಘನಾ ಹಾಗೂ ಚಿರಂಜೀವಿ ಸರ್ಜಾ ತಮ್ಮ ಮನೆಯ ಭೀಮ ಎಂಬ ನಾಯಿ ಮರಿಯನ್ನು ದರ್ಶನ್‌ಗೆ ಗಿಫ್ಟ್‌ ಆಗಿ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!

ಮೇಘನಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಗುಡ್‌ ಮಾರ್ನಿಂಗ್ ಆ್ಯಂಡ್ ಹ್ಯಾಪಿ ಸಂಡೇ. ದರ್ಶನ್ ಸರ್ ನಮ್ಮ ಕುಟುಂಬಕ್ಕೆ ತುಂಬಾ ತುಂಬಾ ಸ್ಪೆಷಲ್‌. ಇವರು ನೀಡಿರುವ ಪ್ರೋತ್ಸಾಹಕ್ಕೆ ನಮ್ಮಿಂದ ಅವರಿಗೆ ಸಣ್ಣದೊಂದು ಉಡುಗೊರೆ' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?